Home » Acid: ದೀಪಾವಳಿಯಂದೇ ಕುದಿಯುವ ನೀರು ಸುರಿದು, ಪತಿ ಮೇಲೆ ಆಸಿಡ್‌ ಎರಚಿದ ಪತ್ನಿ

Acid: ದೀಪಾವಳಿಯಂದೇ ಕುದಿಯುವ ನೀರು ಸುರಿದು, ಪತಿ ಮೇಲೆ ಆಸಿಡ್‌ ಎರಚಿದ ಪತ್ನಿ

0 comments
Crime

Acid: ಪತಿಗೆ ಯಾರೊಂದಿಗೋ ಸಂಬಂಧವಿದೆ ಎಂದು ಸಂಶಯಿಸಿದ ಪತ್ನಿ ಆತನ ಮೇಲೆ ಕುದಿಯುವ ನೀರು ಸುರಿದು, ಆಸಿಡ್‌ ಎರಚಿರುವ ಘಟನೆ ಅಹಮದಾಬಾದಿನಲ್ಲಿ ನಡೆದಿದೆ. ಪತಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪತಿಯ ದೂರಿನ ಮೇರೆಗೆ ಪತ್ನಿಯನ್ನು ಬಂಧನ ಮಾಡಲಾಗಿದೆ.

ರೋಣಕ್‌ (33) ಎಂಬ ಪತಿ ತನ್ನ ಹೆಂಡತಿ ತನ್ನ ಜೊತೆ ಕಳೆದ ಒಂದು ವರ್ಷದಿಂದ ಆಗಾಗ ಜಗಳವಾಡುತ್ತಿದ್ದಳು. ದೀಪಾವಳಿ ದಿನ ಬೆಳಗ್ಗೆ ಮತ್ತೆ ಜಗಳ ಹೆಚ್ಚಿದ್ದು, ಹಬ್ಬದ ದಿನದಂದು ಜಗಳ ಬೇಡ ಎಂದು ಸುಮ್ಮನಿದ್ದರೂ, ಆಕೆ ಕೋಪದಲ್ಲಿ ನಾನು ಮಲಗಿದ್ದ ಸಮಯದಲ್ಲಿ ಬಿಸಿನೀರು ಹಾಕಿದ್ದಾಳೆ. ಕೂಡಲೇ ಆತ ತಪ್ಪಿಸಲು ಯತ್ನ ಮಾಡಿದಾಗ ಆಕೆ ಆಸಿಡ್‌ ಎರಚಿದ್ದಾಳೆ ಎಂದು ವರದಿಯಾಗಿದೆ.

ಆಸಿಡ್‌ ಎರಚಿದ್ದರಿಂದ ಆತ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ.

ಸ್ಯಾಟಲೈಟ್‌ ಪೊಲೀಸರು ಪ್ರಕರಣ ದಾಖಲು ಮಾಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ರೋಣಕ್‌ಗೆ ಮದುವೆಯಾಗಿ ಎರಡು ವರ್ಷಗಳಾಗಿದ್ದು, ಪತಿಗೆ ಬೇರೊಬ್ಬ ಮಹಿಳೆಯ ಜೊತೆ ಸಂಬಂಧವಿದೆ ಎಂದು ಹೇಳಿ ಜಗಳವಾಡುತ್ತಿದ್ದರು.

You may also like