Home » Technology: ನಿಮ್ಮ ‘ಮೊಬೈಲ್’ ನಲ್ಲಿ ಈ ಲಕ್ಷಣಗಳು ಕಂಡು ಬಂದರೆ ‘ಮೊಬೈಲ್’ ಹ್ಯಾಕ್ ಆಗಿದೆ ಎಂದರ್ಥ

Technology: ನಿಮ್ಮ ‘ಮೊಬೈಲ್’ ನಲ್ಲಿ ಈ ಲಕ್ಷಣಗಳು ಕಂಡು ಬಂದರೆ ‘ಮೊಬೈಲ್’ ಹ್ಯಾಕ್ ಆಗಿದೆ ಎಂದರ್ಥ

0 comments

Technology: ಸೈಬರ್ ಕಳ್ಳರಿಗೆ ಮೊಬೈಲ್ ಫೋನ್ಗಳನ್ನು(phone) ಹ್ಯಾಕ್ ಮಾಡೋದು ಕೂಡಾ ಒಂದು ಟಾರ್ಗೆಟ್. ಇದರಿಂದ ವೈಯಕ್ತಿಕ ಡೇಟಾವನ್ನು ಸೋರಿಕೆ ಮಾಡುತ್ತಾರೆ. ಈ ಕಾರಣಕ್ಕೆ ನಿಮ್ಮ ಮೊಬೈಲ್ (mobile) ಫೋನ್ ಹ್ಯಾಕ್ ಆಗಿದೆಯೇ ಎಂದು ಈ ರೀತಿ ತಿಳಿಯಿರಿ.

ಫೋನ್ನಲ್ಲಿ ಹಸಿರು ಡಾಟ್ ಕಾಣಿಸಿಕೊಂಡರೆ ಏನರ್ಥ ?
ಒಂದು ವೇಳೆ ನೀವು ಫೋನ್ ಬಳಸದೆ ಅಥವಾ ಯಾವುದೇ ಅಪ್ಲಿಕೇಶನ್ ಮೈಕ್ರೊಫೋನ್ ಅನ್ನು ಪ್ರವೇಶಿಸದೆ ಇದ್ದಾಗಲೂ ಸಹ, ಮೇಲಿನ ಬಲ ಮೂಲೆಯಲ್ಲಿ ಹಸಿರು ಡಾಟ್ ಅಥವಾ ಸಣ್ಣ ಮೈಕ್ರೊಫೋನ್ ಐಕಾನ್ ಸತತವಾಗಿ ಕಾಣಿಸಿಕೊಂಡರೆ, ಇದರ ನೇರ ಅರ್ಥ ನಿಮ್ಮ ಸಂಭಾಷಣೆಗಳನ್ನು ಯಾರೋ ಕದ್ದು ಕೇಳುತ್ತಿದ್ದಾರೆ ಎಂಬುದಾಗಿದೆ. ಅವರು ನಿಮ್ಮ ರಹಸ್ಯ ಕರೆಗಳು ಮತ್ತು ಖಾಸಗಿ ಮಾತುಕತೆಗಳನ್ನೂ ಸಹ ಆಲಿಸಬಹುದು.

ಸ್ಮಾರ್ಟ್ಫೋನ್ ಹ್ಯಾಕಿಂಗ್ ಅನ್ನು ಪತ್ತೆಹಚ್ಚಲು ಇನ್ನೂ ಹಲವು ಮಾರ್ಗಗಳಿವೆ.
* ಬ್ಯಾಟರಿ ಬೇಗನೆ ಖಾಲಿಯಾಗುವುದು: ಸ್ಮಾರ್ಟ್ಫೋನ್ ಬ್ಯಾಟರಿ ಅಸಾಮಾನ್ಯವಾಗಿ ಬೇಗನೆ ಖಾಲಿಯಾಗುವುದು ಹ್ಯಾಕಿಂಗ್ನ ಒಂದು ಸಂಕೇತವಾಗಿದೆ,
* ಮೊಬೈಲ್ ಕಾರ್ಯಕ್ಷಮತೆ ಕುಂಠಿತ: ಫೋನ್ನ ಕಾರ್ಯಕ್ಷಮತೆ ಕಡಿಮೆಯಾಗುವುದು ಅಥವಾ ಹಠಾತ್ತನೆ ನಿಧಾನವಾಗುವುದು ಸಹ ಹ್ಯಾಕ್ ಚಿಹ್ನೆಗಳಾಗಿವೆ.
* ಕರೆ ಸಮಯದಲ್ಲಿ ಅಸಹಜ ಶಬ್ದಗಳು:
ಫೋನ್ ಕರೆ ಸಮಯದಲ್ಲಿ ಸತತವಾಗಿ ಬೀಪ್ ಅಥವಾ ಯಾವುದೇ ಇತರ ಎಲೆಕ್ಟ್ರಾನಿಕ್ ಯಂತ್ರದ ಶಬ್ದ ಕೇಳಿಬಂದರೆ, ಅದು ನಿಮ್ಮ ಕರೆಯನ್ನು ಯಾರೋ ಕದ್ದು ಕೇಳುತ್ತಿದ್ದಾರೆ ಎಂದು ಸೂಚಿಸಬಹುದು.

You may also like