Kiccha Sudeep: ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡ ಸೀಸನ್ 11 ರ ವೀಕೆಂಡ್ ಎಪಿಸೋಡ್‌ಗಳನ್ನು ನಡೆಸಿಕೊಡುವಾಗ ಮಧ್ಯೆ ಮಧ್ಯೆ ಒಂದು ಕಪ್ಪು ಡ್ರಿಂಕ್ ಅನ್ನು ಕುಡಿಯುತ್ತಾರೆ. ಇದೀಗ ಕೆಲ ದಿನಗಳ ಹಿಂದೆ ಪ್ರೊಮೋದಲ್ಲಿ ಕಿಚ್ಚ ಸುದೀಪ್ ಕೈಯಲ್ಲಿದ್ದ ಗ್ಲಾಸ್‌ನ ಪಾನೀಯದ ಬಗ್ಗೆ ಭಾರೀ ಚರ್ಚೆಯಾಗಿತ್ತು. ಸಧ್ಯ ವೈರಲ್ ವಿಡಿಯೋವೊಂದರಲ್ಲಿ ಸ್ವತಃ ಸುದೀಪ್ ಅವರೇ ಆ ಗ್ಲಾಸ್ ರಹಸ್ಯವನ್ನು ತೆರೆದಿಟ್ಟಿದ್ದಾರೆ.
ಯಸ್, ಕಿಚ್ಚ ಸುದೀಪ್(Kiccha Sudeep)ಅವರು ಕಳೆದ 11 ವರ್ಷಗಳಿಂದ ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋ ನಡೆಸಿಕೊಂಡು ಬರುತ್ತಿದ್ದಾರೆ. ಆ ಮೂಲಕ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಶೋ ನಿರೂಪಣೆ ಮಾಡುವಾಗ ಅವರು ಆಗಾಗ ಏನೋ ಕುಡಿಯುತ್ತಾರಲ್ಲ ಅದು ಏನು ಎಂಬ ಪ್ರಶ್ನೆ ಹಲವರಿಗೆ ಇದೆ. ಹೀಗಾಗಿ ಕಿಚ್ಚ ಇದಕ್ಕೆ ಸ್ವತಹ ಪ್ರತಿಕ್ರಿಯೆ ನೀಡಿದ್ದಾರೆ.
‘ತೆಲುಗು ಬಿಗ್ ಬಾಸ್ ನೋಡುತ್ತಿರುವ ಎಷ್ಟೋ ಜನ ಫ್ಯಾನ್ಸ್ ಒಂದು ಪ್ರಶ್ನೆ ಹಾಕಿ ಹೇಳುತ್ತಾ ಇರುತ್ತಾರೆ. ಸುದೀಪ್ ಅವರು ವೇದಿಕೆಯಲ್ಲಿ ಕುಡಿತಾ ಇರುತ್ತಾರಲ್ಲ ಅದು ಏನು ಅಂತ. ಇದರಲ್ಲಿ ಸ್ವಲ್ಪ ರಮ್, ಸ್ವಲ್ಪ ವಿಸ್ಕಿ..’ ಎಂದು ಕನ್ನಡದಲ್ಲಿ ಮಾತಾಡುತ್ತಿದ್ದ ಸುದೀಪ್ ಅವರು ನಂತರ ಸ್ಪರ್ಧಿಗಳ ಸಹಾಯದಿಂದ ತೆಲುಗಿನಲ್ಲಿ ಮಾತು ಮುಂದುವರಿಸಿದ್ದಾರೆ.
ಸ್ವಲ್ಪ ಅನ್ನೋದಕ್ಕೆ ತೆಲುಗಿನಲ್ಲಿ ಏನು ಹೇಳ್ತಾರೆ? ಕೊಂಚ ರಮ್ ಉಂದಿ, ಕೊಂಚ ವಿಸ್ಕಿ ಉಂದಿ, ಕೊಂಚ ಟಕೀಲಾ ಉಂದಿ ಅನಿ ಥಿಂಕ್ ಚೈ ವದ್ದು. ಕಾಫಿ ಉಂದಿ. ಕಾನಿ ಈ ಕಂಟೆಸ್ಟೆಂಟ್ಕೋ ನಾಕು ಸಾರಾಯಿ ಕಾವಾಲಿ. ಇಕ್ಕಡ ಲೇದು’ ಎಂದು ಸುದೀಪ್ ಹೇಳಿದ್ದು ಕೇಳಿ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ.
