Home » Lawence Bishnoi: ಟಿಪ್ಪು ಅರಮನೆ ಮೇಲೆ ಬಿಷ್ಣೋಯ್‌ ಹೆಸರು; ಕೇಸು ದಾಖಲು

Lawence Bishnoi: ಟಿಪ್ಪು ಅರಮನೆ ಮೇಲೆ ಬಿಷ್ಣೋಯ್‌ ಹೆಸರು; ಕೇಸು ದಾಖಲು

0 comments

Lawrence Bishnoi: ಟಿಪ್ಪು ಅರಮನೆ ಮೇಲೆ ಬಿಷ್ಣೋಯ್‌ ಹೆಸರು ಬರೆದಿರುವ ಘಟನೆ ನಡೆದಿದ್ದು, ಈ ಸಂಬಂಧ ನಂದಿಗಿರಿಧಾಮ ಪೊಲೀಸ್‌ ಠಾಣೆಯಲ್ಲಿ ಸುಮೊಟೋ ಕೇಸು ದಾಖಲಾಗಿದೆ.

ನಂದಿಗಿರಿಧಾಮದಲ್ಲಿರುವ ಭಾರತೀಯ ಪುರಾತತ್ವ ಹಾಗೂ ಸರ್ವೇಕ್ಷಣ ಇಲಾಖೆ ಅಧೀನದ ಟಿಪ್ಪು ಸುಲ್ತಾನ್‌ ಸಮ್ಮರ್‌ ಪ್ಯಾಲೇಸ್‌ ಮೇಲೆ ಕುಖ್ಯಾತ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಹೆಸರನ್ನು ಬರೆಯಲಾಗಿತ್ತು. ಇದೀಗ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ಅಲರ್ಟ್‌ ಆಗಿದ್ದು, ಸುಮೋಟೋ ಪ್ರಕರಣ ದಾಖಲು ಮಾಡಿದ್ದಾರೆ.

ಒಂದು ತಿಂಗಳ ಹಿಂದೆಯೇ ಬಿಷ್ಣೋಯ್‌ ಹೆಸರನ್ನು ಬರೆಯಲಾಗಿದ್ದು, ಪಿಡಿಎಲ್‌ಪಿ ಹಾಗೂ ಬಿಎನ್‌ಎಸ್‌ ಆಕ್ಟ್‌ 324(2), 329(3) ರ ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಪುರಾತ್ವ ಹಾಗೂ ಸರ್ವೇಕ್ಷಣಾ ಇಲಾಖೆ ಸಿಬ್ಬಂದಿ ಬರಹವನ್ನು ಅಳಿಸಿದ್ದಾರೆ. ಲಾರೆನ್ಸ್‌ ಬಿಷ್ಣೋಯ್‌ ಹೆಸರಿನ ಮೇಲೆ ಬಣ್ಣವನ್ನು ಬಳಿಯಲಾಗಿದೆ. ಶೀಘ್ರ ಆರೋಪಿಗಳ ಪತ್ತೆ ಮಾಡಿ ಕಠಿಣ ಕ್ರಮದ ಭರವಸೆಯನ್ನು ಪೊಲೀಸರು ನೀಡಿದ್ದಾರೆ.

You may also like