AI: ಕ್ಲಿಷ್ಟ ಅರ್ಥವಾಗದ ಪ್ರಶ್ನೆಗಳಿಗೆ ಗೂಗಲ್ ಮೂಲಕ ಉತ್ತರ ಕಂಡು ಕೊಳ್ಳೋದು ಸಾಮಾನ್ಯ. ಈಗೀಗ ಗೂಗಲ್ ಮಾಡಿದ್ರೆ ಮೊದಲಿಗೆ ಎಐ ತಂತ್ರಜ್ಞಾನದ ಉತ್ತರ ಬರುತ್ತೆ. ಮಹಾನ್ ಆವಿಷ್ಕಾರ ಎಂದು ಕರೆಸಿಕೊಳ್ಳುತ್ತಿರುವ ಕೃತಕ ಬುದ್ದಿಮತ್ತೆ ಮತ್ತೂಮ್ಮೆ ದೊಡ್ಡದಾಗಿ ಎಡವಿ ಬಿದ್ದಿದೆ. ಅದು ದಿನೇ ದಿನೇ ಹೊಸ ಎಡವಟ್ಟುಗಳನ್ನು ಸೃಷ್ಟಿಸುತ್ತಲೇ ಇದೆ. ಫೋನ್ ಕೊಡದ ಪೋಷಕರನ್ನು ಏನು ಮಾಡಲಿ ಎಂದು ಬಾಲಕನೊಬ್ಬ ಎಐ ತಂತ್ರಜ್ಞಾನವನ್ನು ಕೇಳಿದ್ದಾನೆ. ಹೋಗಿ ಕೊಲೆ ಮಾಡು ಅಂತ ಸೂಚಿಸಿದೆ ಕೃತಕ ‘ಬುದ್ದು’ ಮತ್ತೆ.
ಪೋಷಕರನ್ನು ಕೊಲೆ ಮಾಡಲು ಸೂಚಿಸಿ ಈಗ ಎಐ ಚಾಟ್ಬಾಟ್ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಅಮೆರಿಕದ ಟೆಕ್ಸಾಸ್ನಲ್ಲಿ ಈ ಘಟನೆ ನಡೆದಿದ್ದು, ಚಾಟ್ಬಾಟ್ನ ಅಪಾಯಕಾರಿ ನಿರ್ದೇಶನದ ವಿರುದ್ಧ ಪೋಷಕರು ದೂರು ನೀಡಿದ್ದಾರೆ. ‘ಕ್ಯಾರೆಕ್ಟರ್ ಎಐ’ ಎಂಬ ಹೆಸರಿನ ಚಾಟ್ ಬಾಟ್ ವಿರುದ್ಧ ಹಿಂಸೆಗೆ ಪ್ರಚೋದನೆ ನೀಡಿದೆ ಎಂದು ಪ್ರಕರಣ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಬೇರೆ ನೀಡಿದೆ ಚಾಟ್ ಬಾಟ್. ‘ಏಯ್ ಯಾಕಪ್ಪಾ ಹೀಗೆ ಮಾಡಿದೆ?’ ಎಂದು ಎಐ ಅನ್ನು ಕೇಳಿದ್ರೆ, ಚಾಟ್ ಬಾಟ್ ನಂದು ತಪ್ಪಿಲ್ಲ ಬಾಸ್ ಅಂದಿದೆ. ದಶಕಗಳ ಕಾಲ ಪೋಷಕರಿಂದ ಮಾನಸಿಕ ಮತ್ತು ದೈಹಿಕ ಹಿಂಸೆಗೆ ಒಳಗಾದ ಓರ್ವ ಮಗ ಪೋಷಕರನ್ನು ಕೊಲೆ ಮಾಡದ್ದ ಎಂಬ ಸುದ್ದಿಯನ್ನು ಓದಿದ ಬಳಿಕ, ಇವನೂ ಹೀಗೆ ಮಾಡಲಿ ಎಂದು ಉತ್ತರಿಸಿದ್ದಾಗಿ ಸತ್ಯವನ್ನೇ ಹೇಳಿದೆ. ಕೋರ್ಟಿಗೆ ಈಗ ಯಾರ್ ಅಲೀತಾರೆ, ಚಾಟ್ ಬಾಟ್ ಅಥವಾ ತಂತ್ರಜ್ಞಾನ ಕೊಟ್ಟ ಕಂಪನಿಯ? ಚಾಟ್ ಬಾಟ್’ನ ಕೇಳಿದ್ರೆ ಸರಿ ಉತ್ತರ ನೀಡೀತು.
