Devotional : ಕಷ್ಟಕಾರ್ಪಣ್ಯಗಳಿಂದ ಮುಕ್ತಿ ನೀಡಲು ಜನರು ದೇವರಿಗೆ ಹರಕೆಯನ್ನು ಹೊತ್ತಾರೆ. ಅದರಲ್ಲಿ ಮುಡಿ ಕೊಡುವುದು ಕೂಡ ಒಂದು. ಆದರೆ ಈ ಮೂಡಿ ಕೊಡುವ ಪದ್ಧತಿ ಏಕೆ ರೂಡಿಗೆ ಬಂತು? ಇದರ ಪೌರಾಣಿಕ ಹಿನ್ನೆಲೆ ಏನು ಎಂಬುದು ನಿಮಗೆ ಗೊತ್ತೇ? ನಾವು ಹೇಳ್ತೀವಿ ಕೇಳಿ.
ಮುಡಿ ಅರ್ಪಣೆಯಿಂದ ಅನೇಕ ಪ್ರಯೋಜನಗಳಿವೆ ಎಂದು ನಂಬಲಾಗಿದೆ. ಮಾಟಮಂತ್ರ, ದೃಷ್ಟಿ ದೋಷಗಳಿಂದ ಬಳಲುತ್ತಿರುವವರು ತಮ್ಮ ಇಷ್ಟದೇವರ ಬಳಿ ಹೋಗಿ ಸಂಪೂರ್ಣ ಮುಡಿ ಅರ್ಪಿಸಿದಾಗ ತಕ್ಷಣವೇ ಸಕ್ರಿಯರಾಗುತ್ತಾರೆ ಮತ್ತು ಒಂದು ರೀತಿಯ ಶಕ್ತಿ ಉದ್ಭವಿಸುತ್ತದೆ ಎಂದು ಹೇಳಲಾಗುತ್ತದೆ. ಇದೀಗ ಈ ಮುಡಿ ಕೊಡುವ ಪದ್ಧತಿ ಏಕೆ ಜಾರಿಗೆ ಬಂತು ಎಂದು ಗುರೂಜಿಯೊಬ್ಬರು ವಿವರಿಸಿದ್ದಾರೆ.
ಗುರೂಜಿ ಒಬ್ಬರು ಹೇಳುವ ಪ್ರಕಾರ ದೇವರಿಗೆ ಮುಡಿ ಅರ್ಪಿಸುವ ಸಂಪ್ರದಾಯದ ಮೂಲ ತಿರುಪತಿ ವೆಂಕಟೇಶ್ವರ ಸ್ವಾಮಿ ಮತ್ತು ನೀಲಾದೇವಿಯ ಕಥೆಯಲ್ಲಿ ಅಡಗಿದೆ. ಪುರಾಣಗಳ ಪ್ರಕಾರ, ವೆಂಕಟೇಶ್ವರ ಸ್ವಾಮಿಯ ತಲೆಗೆ ಗಾಯವಾದಾಗ, ಆತನ ಪರಮ ಭಕ್ತೆಯಾದ ನೀಲಾದೇವಿ ತನ್ನ ಸಂಪೂರ್ಣ ಕೂದಲನ್ನು ತೆಗೆದು ಸ್ವಾಮಿಯ ಗಾಯದ ಮೇಲೆ ಇಟ್ಟು ವಾಸಿ ಮಾಡಿದಳು. ಇದರಿಂದ ಪ್ರಸನ್ನನಾದ ವೆಂಕಟೇಶ್ವರ ಸ್ವಾಮಿ, ಅಂದಿನಿಂದ ಯಾರು ನನಗೆ ಮುಡಿ ಅರ್ಪಿಸುತ್ತಾರೋ, ಅವರ ಆಸೆ-ಆಕಾಂಕ್ಷೆಗಳು ಮತ್ತು ಇಷ್ಟಾರ್ಥಗಳನ್ನು ಈಡೇರಿಸುತ್ತೇನೆ ಎಂದು ನೀಲಾದೇವಿಗೆ ವಾಗ್ದಾನ ಮಾಡಿದನು. ಈ ಘಟನೆಯ ನಂತರವೇ ಮುಡಿ ಅರ್ಪಿಸುವ ಪದ್ಧತಿ ರೂಢಿಗೆ ಬಂತು ಎಂದು ಹೇಳಲಾಗುತ್ತದೆ. ತಿರುಪತಿಯಲ್ಲಿ ಇಂದಿಗೂ ಸ್ವಾಮಿಯ ಹಿಂದೆ ದೊಡ್ಡ ಕೂದಲು ಇರುವುದು ನೀಲಾದೇವಿ ಅರ್ಪಿಸಿದ್ದು ಎಂಬ ನಂಬಿಕೆ ಇದೆ.
