Screen Protector: ಸ್ಮಾರ್ಟ್‌ಫೋನ್ (Smartphone) ಬಳಕೆದಾರರು ಎಷ್ಟೇ ಸುರಕ್ಷಿತವಾಗಿ ತಮ್ಮ ಮೊಬೈಲ್ ಫೋನ್ ಗಳನ್ನು ನೋಡಿಕೊಂಡರು ಕೆಲವೊಮ್ಮೆ ಅದು ಕೈತಪ್ಪಿ ಬಿದ್ದು ಹೊಡೆದು ಹೋಗುವುದುಂಟು. ಅದರಲ್ಲೂ ಡಿಸ್ಪ್ಲೇನ್ಂತೂ ತುಂಬಾ ಜಾಗೃತೆ ಮಾಡಬೇಕು. ಇಂತಹ ಸಮಯದಲ್ಲಿ ಸ್ಕ್ರೀನ್ ಪ್ರೊಟೆಕ್ಟರ್ ಈ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇಂದು ಮಾರುಕಟ್ಟೆಯಲ್ಲಿ ಹಲವು ರೀತಿಯ ಸ್ಕ್ರೀನ್ ಪ್ರೊಟೆಕ್ಟರ್‌ಗಳು ಲಭ್ಯವಿದೆ. ಹಾಗಾದರೆ ನಿಮ್ಮ ಮೊಬೈಲಿಗೆ ಯಾವ ಸ್ಕ್ರೀನ್ ಪ್ರೊಟೆಕ್ಟರ್ ಬೆಸ್ಟ್ ಗೊತ್ತಾ?
ನಿಮ್ಮ ಫೋನ್ ಮಾದರಿ ಮತ್ತು ನಿಮ್ಮ ಅಗತ್ಯಗಳನ್ನು ಅವಲಂಬಿಸಿರುತ್ತದೆ. ನೀವು ಹೆಚ್ಚಿನ ರಕ್ಷಣೆ ಬಯಸಿದರೆ, ಟೆಂಪರ್ಡ್ ಗ್ಲಾಸ್ ಉತ್ತಮ. ಇದು ಹೆಚ್ಚು ದುಬಾರಿಯಾಗಿದೆ, ಆದರೆ ಗೀರುಗಳು ಮತ್ತು ಒಡೆದುಹೋಗುವಿಕೆಯನ್ನು ಪ್ರತಿರೋಧಿಸುವಲ್ಲಿ ಇದು ಅತ್ಯುತ್ತಮವಾಗಿದೆ.
ಅಂದಹಾಗೆ ಟೆಂಪರ್ಡ್ ಗ್ಲಾಸ್ ಸ್ಕ್ರೀನ್ ಪ್ರೊಟೆಕ್ಟರ್‌ಗಳು ಅತ್ಯಂತ ಬಲಿಷ್ಠವಾಗಿವೆ. ಅವು ನಿಮ್ಮ ಫೋನ್ ಬಿದ್ದಾಗ ಮತ್ತು ಗೀರುಗಳ ವಿರುದ್ಧ ಅತ್ಯುತ್ತಮ ರಕ್ಷಣೆ ನೀಡುತ್ತವೆ. ಕೆಲವು ಟೆಂಪರ್ಡ್ ಗ್ಲಾಸ್‌ಗಳು ವಿಶೇಷ ವೈಶಿಷ್ಟ್ಯಗಳನ್ನು ಹೊಂದಿವೆ, ಉದಾಹರಣೆಗೆ ಗ್ಲೇರ್ ರಿಡಕ್ಷನ್ ತಂತ್ರಜ್ಞಾನ ಅಥವಾ ಪ್ರೈವಸಿ ತಂತ್ರಜ್ಞಾನ, ಇದು ಇತರರು ನಿಮ್ಮ ಪರದೆಯನ್ನು ನೋಡದಂತೆ ತಡೆಯುತ್ತದೆ. ಅನಾನುಕೂಲವೆಂದರೆ ಅವು ಸ್ವಲ್ಪ ದಪ್ಪವಾಗಿರುತ್ತವೆ, ಇದು ಫೋನ್‌ನ ಡಿಸ್ಪ್ಲೇ ನಿಮಗೆ ಸರಿಯಾಗಿ ಕಾಣದಿರುವ ಸಂಭವವಿರುತ್ತದೆ.
