BBK-12 : ಬಿಗ್ ಬಾಸ್ ಕನ್ನಡ ಸೀಸನ್ 12 ಉತ್ತಮ ಪ್ರತಿಕ್ರಿಯೆಯೊಂದಿಗೆ ಭರ್ಜರಿ ಪ್ರದರ್ಶನವನ್ನು. ಸಾಕಷ್ಟು ಎಕ್ಸ್ಟ್ರಾರ್ಡಿನರಿ ಪ್ರತಿಭೆಗಳು ಈ ಬಾರಿ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಈ ನಡುವೆ ಎಲ್ಲರ ಗಮನ ಸೆಳೆಯುತ್ತಿರುವುದು ಕಪಲ್ ಜೋಡಿ ಎಂದೇ ಫೇಮಸ್ ಆಗುತ್ತಿರುವ ಸೂರಜ್ ಮತ್ತು ರಾಶಿಕ.
ರಾಶಿಕಾ ಅವರು ಬಿಗ್ ಬಾಸ್ ಆರಂಭದಿಂದಲೂ ಕೂಡ ಮನೆಯೊಳಗೆ ಇದ್ದಾರೆ ಮೂರು ವಾರಗಳ ಬಳಿಕ ಸೂರಜ್ ವೈಲ್ಡ್ ಕಾರ್ಡ್ ಮುಖಾಂತರ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಇದೀಗ ಇವರಿಬ್ಬರ ನಡುವೆ ಪ್ರೇಮಕಹಾನಿ ಶುರುವಾಗಿದೆ ಎಂದೆಲ್ಲ ವಿಶ್ಲೇಷಿಸಲಾಗುತ್ತಿದೆ. ಇದಕ್ಕೆ ಕಾರಣ ಇವರಿಬ್ಬರು ನಡೆದುಕೊಳ್ಳುತ್ತಿರುವ ರೀತಿ. ಈ ನಡುವೆ ಅಚ್ಚರಿ ಎಂಬಂತೆ ಸೂರಜ್ ಅವರು ರಾಶಿಕಾಗೆ ಐ ಲವ್ ಯು ಎಂದು ಪ್ರಪೋಸ್ ಮಾಡಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಾಗಿದ್ರೆ ಇದಕ್ಕೆ ರಾಶಿಕ ಏನೆಂದು ಹೇಳಿದರು? ಗೊತ್ತಾ
ಯಸ್, ‘ಬಿಗ್ ಬಾಸ್’ ಮನೆಯಲ್ಲಿ ಜೋರಾಗಿ ಜಗಳ ನಡೆಯುತ್ತಿತ್ತು. ಅತ್ತ ರಾಶಿಕಾ ಹಾಗೂ ಸೂರಜ್ ತಮ್ಮದೇ ಲೋಕದಲ್ಲಿ ಮುಳುಗಿ ಹೋಗಿದ್ದರು. ಈ ರೀತಿ ಮುಳುಗಿ ಹೋಗುವಾಗಲೇ ಸೂರಜ್ ಪ್ರಪೋಸ್ ಮಾಡಿಯೇ ಬಿಟ್ಟರು. ನೇರವಾಗಿ ‘ಐ ಲವ್ ಯೂ’ ಎಂದು ಸೂರಜ್ ಹೇಳಿದ್ದಾರೆ. ಇದನ್ನು ಕೇಳಿ ರಾಶಿಕಾ ಶಾಕ್ ಆದರು. ನನಗೆ ಅದರಲ್ಲಿ ಆಸಕ್ತಿ ಇಲ್ಲ ಎಂದಿದ್ದಾರೆ. ಅಂದಹಾಗೆ ಸೂರಜ್ ಪ್ರಪೋಸ್ ಮಾಡುತ್ತಿದ್ದಂತೆ ಅವರು ಒಪ್ಪಿಕೊಳ್ಳುತ್ತಾರೆ ಎಂಬುದು ಅನೇಕರ ಊಹೆ ಆಗಿತ್ತು. ಆದರೆ, ಅವರು ಆ ರೀತಿ ಮಾಡಿಲ್ಲ.
