Home » KEA Recruitment: ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

KEA Recruitment: ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

0 comments
PSI Recruitment

 

KEA Recruitment: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದಲ್ಲಿ ಖಾಲಿ ಇರುವ ಉಳಿಕೆ ಮೂಲವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಸಂಬಂಧ ದಿನಾಂಕ ವಿಸ್ತರಣೆ ಮಾಡಿ ಮಾಹಿತಿ ಪ್ರಕಟಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಆಸಕ್ತ ಅಭ್ಯರ್ಥಿಗಳಿಗೆ ಸದರಿ ಹುದ್ದೆಗಳ ಭರ್ತಿಗೆ ಮುಂದಾಗಿತ್ತು. ಇದೀಗ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ನವೆಂಬರ್ 14ರವರೆಗೆ ವಿಸ್ತರಣೆ ಮಾಡಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಇನ್ನೂ ಸುಮಾರು 14 ದಿನಗಳ ಸಮಯಾವಕಾಶ ಅಭ್ಯರ್ಥಿಗಳಿಗೆ ಸಿಕ್ಕಂತಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಒಟ್ಟು 33 ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ.. ವ್ಯವಸ್ಥಾಪಕರು (ಗ್ರೂಪ್ ಎ, 4 ಹುದ್ದೆಗಳು), ಸಹಾಯಕ ವ್ಯವಸ್ಥಾಪಕರು (ಗ್ರೂಪ್ ಬಿ, 5 ಹುದ್ದೆ), ಹಿರಿಯ ಸಹಾಯಕರು (ಗ್ರೂಪ್ ಸಿ, 5 ಹುದ್ದೆ), ಕಿರಿಯ ಸಹಾಯಕರು (ಗ್ರೂಪ್ ಸಿ, 13 ಹುದ್ದೆ), ಸಹಾಯಕ ಕಾರ್ಯಪಾಲಕ ಅಭಿಯಂತರರು (ಸಿವಿಲ್- ಗ್ರೂಪ್ ಎ, 1 ಹುದ್ದೆ), ಸಹಾಯಕ ಅಭಿಯಂತರರು (ಸಿವಿಲ್- ಗ್ರೂಪ್ ಬಿ, 3 ಹುದ್ದೆ), ಸಹಾಯಕ ಅಭಿಯಂತರರು (ವಿದ್ಯುತ್- ಗ್ರೂಪ್ ಬಿ, 2 ಹುದ್ದೆ) ಇವುಗಳಿಗೆ ಅರ್ಜಿ ಆಹ್ವಾನಿಸಿದೆ.

ಪ್ರಾಧಿಕಾರವು ಹೊರಡಿಸಿದ್ದ ಅಕ್ಟೋಬರ್ 8ರಂದು ಅಧಿಸೂಚನೆ ಹೊರಡಿಸಿತ್ತು. ವಿವಿಧ ಸರ್ಕಾರಿ ಇಲಾಖೆ/ಸಂಸ್ಥೆಗಳ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೂ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 14ರವರೆಗೆ ಅವಕಾಶವಿದೆ. ಅಭ್ಯರ್ಥಿಗಳು ಶುಲ್ಕವನ್ನು ನವೆಂಬರ್ 15ರೊಳಗೆ ಪಾವತಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುಜಿಸಿಇಟಿ ಆಯ್ಕೆ ದಾಖಲಾತಿ ದಿನಾಂಕ ವಿಸ್ತರಣೆ

ಇನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) UGCET-25 ಕೃಷಿ ವಿಜ್ಞಾನ ಹಾಗೂ ಪಶು ಸಂಗೋಪನೆ ಕಾಲೇಜುಗಳ ಪ್ರವೇಶಕ್ಕೆ ಆಪ್ಷನ್ಸ್ ದಾಖಲಿಸಲು ಇದ್ದ ಕೊನೆ ದಿನಾಂಕವನ್ನು ನವೆಂಬರ್ 4ರಂದು ಬೆಳಿಗ್ಗೆ 11 ಗಂಟೆವರೆಗೆ ವಿಸ್ತರಣೆ ಮಾಡಿದೆ. ಎರಡು ಕೃಷಿ ಮತ್ತು ತೋಟಗಾರಿಕೆ ಕಾಲೇಜುಗಳ ಪ್ರವೇಶಕ್ಕೆ ಹೊಸದಾಗಿ 63 ಸೀಟು ಮಂಜೂರಾಗಿರುವ ಕಾರಣ ಈ ಅವಕಾಶ ನೀಡಲಾಗಿದೆ.

You may also like