Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಇಂದು ಸೆಷನ್ಸ್ ಕೋರ್ಟ್‌ನಲ್ಲಿ ಚಾರ್ಜ್ ಫ್ರೇಮ್ ಮಾಡಲಾಗುತ್ತದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ 17 ಆರೋಪಿಗಳ ಖುದ್ದು ಹಾಜರಾತಿಗೆ ಕೋರ್ಟ್ ಸೂಚನೆ ನೀಡಿದೆ.
ದರ್ಶನ್, ಪವಿತ್ರಾಗೌಡ, ನಂದೀಶ್, ಕೇಶವಮೂರ್ತಿ, ಪವನ್, ರಾಘವೇಂದ್ರ, ಧನುಷ್, ಧನರಾಜು, ಪ್ರದೂಷ್ ಸೇರಿ ಪ್ರಕರಣದ ಎಲ್ಲಾ 17 ಆರೋಪಿಗಳನ್ನು ಕೋರ್ಟ್ ಸೂಚನೆಯ ಮೇರೆಗೆ ಜೈಲು ಅಧಿಕಾರಿಗಳು ಇಂದು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾರ್ಜ್ ಪ್ರೇಮ್ ಮಾಡುವ ಕುರಿತು ನ್ಯಾಯಾಧೀಶರು ಆರೋಪಿಗಳ ಗಮನಕ್ಕೆ ತರುತ್ತಾರೆ. ಇದಕ್ಕೆ ಆರೋಪಿತರು ಒಪ್ಪಿಗೆ ಸೂಚಿಸುತ್ತಾರೋ ಇಲ್ಲ ಅನ್ನುವುದನ್ನು ನೋಡಿ ಮುಂದಿನ ತೀರ್ಮಾನವನ್ನು ನ್ಯಾಯಾಧೀಶರು ತಗೊಳ್ಳುತ್ತಾರೆ.
