Train : ವೀಕೆಂಡ್ ಹಾಗೂ ಹಬ್ಬಗಳ ಸಂದರ್ಭದಲ್ಲಿ ಬೇರೆ ಊರುಗಳಲ್ಲಿ ಹಾಗೂ ದೊಡ್ಡ ಮಹಾನಗರಗಳಲ್ಲಿರುವ ಅನೇಕ ಜನರು ತಮ್ಮ ಊರುಗಳಿಗೆ ತೆರಳುತ್ತಾರೆ. ಇಂತಹ ಸಂದರ್ಭದಲ್ಲಿ ರೈಲುಗಳು, ಬಸ್ಸುಗಳು ಕಾಲಿಡದಷ್ಟು ರಶ್ ಆಗಿಬಿಡುತ್ತವೆ. ಹೀಗಿರುವಾಗ ಕೆಲವೊಮ್ಮೆ ಬಸ್ಗಳ ಸಂಖ್ಯೆಯನ್ನು ಹೆಚ್ಚು ಮಾಡಲಾಗುತ್ತದೆ. ಆದರೆ ರೈಲುಗಳಲ್ಲಿ ಯಾವುದೇ ಕಾರಣಕ್ಕೂ ಭೋಗಿಗಳನ್ನು ಹೆಚ್ಚಿಸುವುದಿಲ್ಲ. ಇದು ಏಕೆ ಹೀಗೆ? ಇಲ್ಲಿದೆ ನೋಡಿ ಇಂಟರೆಸ್ಟ್ ಸ್ಟೋರಿ.
ಯಸ್, ಹೆಚ್ಚಿನ ಜನರು ದೀರ್ಘ ಪ್ರಯಾಣಕ್ಕಾಗಿ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಪರಿಣಾಮವಾಗಿ, ರೈಲುಗಳು ಸಾಕಷ್ಟು ಜನದಟ್ಟಣೆಯಿಂದ ಕೂಡಿರುತ್ತವೆ ಮತ್ತು ಹಬ್ಬಗಳ ಸಮಯದಲ್ಲಿ ಈ ಜನಸಂದಣಿ ಇನ್ನಷ್ಟು ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇಷ್ಟೊಂದು ಜನಸಂದಣಿ ಇದ್ದರೂ ಪ್ಯಾಸೆಂಜರ್ ರೈಲುಗಳ ಕೋಚ್‌ಗಳನ್ನು ಹೆಚ್ಚಿಸಲಾಗಿಲ್ಲ. ಇದಕ್ಕೆ ಬೇರೆಯೇ ಕಾರಣ ಇದೆ.
ವಾಸ್ತವವಾಗಿ, ಭಾರತದಲ್ಲಿ ಒಂದು ಪ್ರಯಾಣಿಕ ರೈಲು 24 ಬೋಗಿಗಳನ್ನು ಹೊಂದಿರುತ್ತದೆ. ಪ್ರತಿ ಕೋಚ್ 25 ಮೀಟರ್ ಉದ್ದವಿದ್ದು, ರೈಲಿನ ಒಟ್ಟು ಉದ್ದ 600 ಮೀಟರ್. ಭಾರತೀಯ ರೈಲ್ವೆಯಲ್ಲಿ, ಒಂದು ಲೂಪ್ ಲೈನ್ 650 ಮೀಟರ್ ಉದ್ದವಿರುತ್ತದೆ. ಇದು ಒಂದೇ ಮಾರ್ಗದಲ್ಲಿ ಪ್ರಯಾಣಿಸುವ ಎರಡು ರೈಲುಗಳು ಒಂದು ಮಾರ್ಗದಲ್ಲಿ ಇನ್ನೊಂದು ರೈಲು ಹಾದುಹೋಗುವವರೆಗೆ ಕಾಯುವ ಮಾರ್ಗವಾಗಿದೆ.
ಅಂತಹ ಪರಿಸ್ಥಿತಿಯಲ್ಲಿ, ಪ್ಯಾಸೆಂಜರ್ ರೈಲು 650 ಮೀಟರ್ ಉದ್ದವನ್ನು ಮೀರಿದರೆ, ಅದು ಈ ಲೂಪ್ ಲೈನ್ ಅನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಎಲ್ಲಾ ಪ್ಯಾಸೆಂಜರ್ ರೈಲುಗಳು 24 ಕ್ಕಿಂತ ಹೆಚ್ಚು ಬೋಗಿಗಳನ್ನು ಹೊಂದಿರುವುದಿಲ್ಲ. ಹೊಂದಿಸಲು ಕೂಡ ಸಾಧ್ಯವಾಗುವುದಿಲ್ಲ.
ಇನ್ನು ಒಂದು ಸರಕು ರೈಲು ಸಾಮಾನ್ಯವಾಗಿ 58 ರಿಂದ 60 ಬೋಗಿಗಳನ್ನು ಹೊಂದಿರುತ್ತದೆ. ಇಲ್ಲಿ ಯಾವ ಸಮಸ್ಯೆಗೆ ಆಗುವುದಿಲ್ಲ. ಕಾರಣ ಏನೆಂದರೆ ಪ್ರತಿಯೊಂದೂ ಕೇವಲ 10 ರಿಂದ 15 ಮೀಟರ್ ಉದ್ದವಿರುತ್ತದೆ. ಗೂಡ್ಸ್ ರೈಲಿನ ಕೋಚ್‌ಗಳು ಚಿಕ್ಕದಾಗಿರುತ್ತವೆ ಆದರೆ ಪ್ಯಾಸೆಂಜರ್ ರೈಲಿನ ಕೋಚ್‌ಗಳು ಕಡಿಮೆ ಕೋಚ್‌ಗಳನ್ನು ಹೊಂದಿದ್ದರೂ ಉದ್ದವಾಗಿರುತ್ತವೆ.
