Mosquito control: ಜನರಿಗೆ ಯಾವ ಕಾಟದಿಂದ ತಪ್ಪಿಸಿಕೊಂಡರೂ ಈ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಬಿಡಿ. ಹೈಟೆಕ್ ಆಗಿರುವವರು ಹೈಟೆಕ್ ಎಚ್ಚರಿಕೆಗಳ ಮೂಲಕ ಹೇಗೋ ಬಚಾವ್ ಆಗಬಹುದು. ಆದರೆ ಸಾಮಾನ್ಯ ಜನರಿಗೆ ಸೊಳ್ಳೆಗಳು ಕಾಟ ಕೊಡುತ್ತಲೇ ಇರುತ್ತವೆ. ಸಂಜೆಯಾಗುತ್ತಿದ್ದಂತೆ ಸಂಗೀತ ಹಾಡುತ್ತಾ ಮನೆಗೆ ನುಗ್ಗುತ್ತವೆ. ಹೇಗಪ್ಪಾ ಇವುಗಳಿಂದ ಪಾರಾಗೋದು, ಸೊಳ್ಳೆಯನ್ನು ನಿಯಂತ್ರಿಸುವುದು(Mosquito control) ಹೇಗೆ ಎಂಬ ಯೋಚನೆ ಹಲವರಿಗೆ. ಹಾಗಿದ್ರೆ ನಾವ್ ಹೇಳ್ತೀವಿ ಸಿಂಪಲ್ ಟಿಪ್ಸ್!!
ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಇಂದು ಹಲವು ಮಾರ್ಗಗಳಿವೆ. ಸೊಳ್ಳೆ ಬತ್ತಿ, ಗುಡ್ ನೈಲ್, ಕಾಯಿಲ್, ಆಲ್ ಔಟ್ ಸೇರಿ ಕೆಲವು ಬಗೆಯ ಕ್ರೀಮ್ ಗಳು ಕೂಡ ಇವೆ. ಆದರೆ ಇದೆಲ್ಲವೂ ತಾತ್ಕಾಲಿಕ ಪರಿಹಾರ. ಆದರೆ ನಾವು ಪರ್ಮನೆಂಟ್ ಪರಿಹಾರ ನೀಡುತ್ತೇವೆ. ಅಂದರೆ ಸೊಳ್ಳೆ ಕಾಟದಿಂದ ಪರ್ಮನೆಂಟ್ ಆಗಿ ಬಚಾವ್ ಆಗ್ಬೇಕಾ? ಹಾಗಿದ್ರೆ ಮನೆ ಬಾಗಿಲಲ್ಲಿ ನಿಂಬೆಹಣ್ಣು ಒಂದನ್ನು ಕತ್ತರಿಸಿಬಿಡಿ. ಹೀಗೆ ಮಾಡಿದ್ರೆ ನೀವು ಡೋರ್ ಓಪನ್ ಇಟ್ಟರೂ ಕೂಡ ಒಂದು ಸೊಳ್ಳೆಯೂ ಮನೆ ಒಳಗೆ ಬಾರದು
ಹೌದು, ಸಂಜೆಯಾದರೆ ಸೊಳ್ಳೆಗಳ ಹಿಂಡು ಮನೆಯೊಳಗೆ ನುಗ್ಗುತ್ತದೆ. 2 ನಿಮಿಷ ಬಾಗಿಲು ತೆರೆದ ತಕ್ಷಣ ನೂರಾರು ಸೊಳ್ಳೆಗಳು ಮನೆಯೊಳಗೆ ಎಂಟ್ರಿ ಕೊಟ್ಟು ಎಲ್ಲರಿಗೂ ಮುತ್ತಿಡುತ್ತವೆ. ಸೊಳ್ಳೆಗಳನ್ನು ಹೋಗಲಾಡಿಸಲು ನಿಂಬೆಹಣ್ಣನ್ನು ಬಳಸಬಹುದು. ನಿಂಬೆಹಣ್ಣಿನ ಸಹಾಯದಿಂದ ಸೊಳ್ಳೆಗಳನ್ನು ಸುಲಭವಾಗಿ ಓಡಿಸಬಹುದು.
ಒಂದು ನಿಂಬೆಹಣ್ಣಿನ ತುಂಡನ್ನು ತೆಗೆದುಕೊಂಡು ಅದರಲ್ಲಿ 5-6 ಲವಂಗ ಚುಚ್ಚಿ. ಈ ನಿಂಬೆಹಣ್ಣನ್ನು ಮನೆಯ ಒಂದು ಮೂಲೆಯಲ್ಲಿ, ಬಾಗಿಲಿನ ಬಳಿ ಇರಿಸಿ. ಇದರ ವಾಸನೆಯು ಸೊಳ್ಳೆಗಳನ್ನು ಹಿಮ್ಮೆಟ್ಟಿಸುತ್ತದೆ. ಚರ್ಮಕ್ಕೆ ಲವಂಗದ ಎಣ್ಣೆಯನ್ನು ಹಚ್ಚುವುದು ಸಹ ಸೊಳ್ಳೆ ಕಡಿತದಿಂದ ಮುಕ್ತಿ ಪಡೆಯಲು ಪರಿಣಾಮಕಾರಿ ಮಾರ್ಗವಾಗಿದೆ.
