Home » PM kisan: ‘ಪಿಎಂ ಕಿಸಾನ್’ 21ನೇ ಕಂತಿನ ಹಣ ಯಾವಾಗ ಬರುತ್ತೆ? ಈಗಲೇ ಸ್ಟೇಟಸ್ ಚೆಕ್ ಮಾಡಿ ನೋಡಿ

PM kisan: ‘ಪಿಎಂ ಕಿಸಾನ್’ 21ನೇ ಕಂತಿನ ಹಣ ಯಾವಾಗ ಬರುತ್ತೆ? ಈಗಲೇ ಸ್ಟೇಟಸ್ ಚೆಕ್ ಮಾಡಿ ನೋಡಿ

0 comments
PM Kisan

PM Kisan : ರೈತರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆ(PM Kissan Scheme)ಅಡಿ ಪ್ರತಿವರ್ಷವೂ ರೈತರಿಗೆ 6,000 ಹಣವನ್ನು ನೀಡುತ್ತಿದೆ. ಈಗಾಗಲೇ 20 ಕಂತಿನ ಹಣವು ರೈತರ ಖಾತೆಗೆ ಜಮಾ ಆಗಿದ್ದು, ಈಗ 21ನೇ ಕಂತಿನ ಹಣಕ್ಕೆ ಎಲ್ಲರೂ ಕಾದು ಕೂತಿದ್ದಾರೆ. ಹಾಗಾದರೆ 21ನೇ ಕ್ರಾಂತಿನ ಹಣ ಯಾವಾಗ ಬರುತ್ತೆ ಎಂದು ಈಗಲೇ ಸ್ಟೇಟಸ್ ಚೆಕ್ ಮಾಡಿ ನೋಡಿಕೊಳ್ಳಿ.

ಸ್ಟೇಟಸ್ ಪರಿಶೀಲಿಸುವುದು ಹೇಗೆ?
ಮೊದಲಿಗೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ pmkisan.gov.in ಗೆ ಹೋಗಿ.
ನೀವು ಬಯಸಿದರೆ, ವೆಬ್‌ಸೈಟ್ ಬದಲಿಗೆ, ನೀವು ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಬಳಸಬಹುದು.
ಇದರ ನಂತರ, ಮುಖಪುಟದಲ್ಲಿ ನಿಮ್ಮ ಸ್ಟೇಟಸ್‌ ತಿಳಿಯಿರಿ ಅಥವಾ ಫಲಾನುಭವಿ ಸ್ಟೇಟಸ್‌ ಆಯ್ಕೆಯನ್ನು ಆರಿಸಿ.
ಇದರ ನಂತರ, ಹೊಸ ಪುಟ ತೆರೆದಾಗ, ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ.
ನಿಮಗೆ ನೋಂದಣಿ ಸಂಖ್ಯೆ ನೆನಪಿಲ್ಲದಿದ್ದರೆ, ನಿಮ್ಮ ನೋಂದಣಿ ಸಂಖ್ಯೆಯನ್ನು ತಿಳಿಯಿರಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
ಇದರ ನಂತರ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು Get Data ಅಥವಾ Get Details ಮೇಲೆ ಕ್ಲಿಕ್ ಮಾಡಿ.
ಹೀಗೆ ಮಾಡಿದ ನಂತರ, ನಿಮ್ಮ ಪಾವತಿ ಸ್ಟೇಟಸ್‌ ನಿಮ್ಮ ಪರದೆಯ ಮೇಲೆ ಗೋಚರಿಸುತ್ತದೆ.
ಇದು ನಿಮ್ಮ 21 ನೇ ಕಂತು ಬಿಡುಗಡೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ನಿಮಗೆ ತಿಳಿಸುತ್ತದೆ.

ಅಂದಹಾಗೆ ಪಿಎಂ ಕಿಸಾನ್ ಹಣದ ಜಮೆಗೆ ಈಗಾಗಲೇ ದಿನಗಣನೆ ಆರಂಭ ಆಗಿದೆ. ಕೆಲವು ರಾಜ್ಯದ ರೈತರಿಗೆ ಈಗಾಗಲೇ ಜಮೆ ಮಾಡಲಾಗಿದೆ. ಉಳಿದ ರಾಜ್ಯದ ಜನರಿಗೆ ನಾಳೆ ಅಥವಾ ನಾಳಿದ್ದು ಹಣ ಜಮ ಆಗಲಿದೆ ಎಂಬ ಮಾಹಿತಿ ಇದೆ. ಅಥವಾ 21 ನೇ ಕಂತು ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದರೂ ಕೂಡ ನೀವು ಈ ಸ್ಟೇಟಸ್ ಚೆಕ್ ಮಾಡಿ ಹಣ ಬರುವ ಸಮಯವನ್ನು ತಿಳಿದುಕೊಳ್ಳಿ.

You may also like