NewYork: ವಿದೇಶಗಳ ಪ್ರಮುಖ ಅಧಿಕಾರದ ಹುದ್ದೆಯಲ್ಲಿ ಭಾರತೀಯರೇ ರಾರಾಜಿಸುತ್ತಿದ್ದಾರೆ. ಇದೀಗ ಮತ್ತೆ ನ್ಯೂಯಾರ್ಕ್ ಮೇಯರ್ ಆಗಿ ಭಾರತ ಮೂಲದ ಸಂಜಾತ ಜೊಹ್ರನ್ ಅವರು ಆಯ್ಕೆಯಾಗಿದ್ದಾರೆ.
ಅಮೆರಿಕದ ಅತಿ ದೊಡ್ಡ ನಗರವಾದ ನ್ಯೂಯಾರ್ಕ್ ನಗರದ ಮೇಯರ್‌ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ, ಭಾರತ ಸಂಜಾತ ಜೊಹ್ರಾನ್ : (34) ಐತಿಹಾಸಿಕ ಗೆಲುವು ದಾಖಲಿಸಿದ್ದಾರೆ. ನ್ಯೂಯಾರ್ಕ್ ಪ್ರಥಮ ಪ್ರಜೆಯಾಗಿ ಆಯ್ಕೆಯಾದ ಅಲ್ಲದೆ ಮೊದಲ ಮುಸ್ಲಿಂ ಹಾಗೂ ದಕ್ಷಿಣ ಏಷ್ಯಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
ಜೊಹ್ರಾನ್ ಅವರು ಭಾರತದ ಸಿನಿಮಾ ನಿರ್ದೇಶಕಿ, ನಿರ್ಮಾಪಕಿ ಮೀರಾ ನಾಯರ್, ಪ್ರೊ. ಮಹಮದ್ ಮಮ್ಹಾನಿ ಅವರ ಪುತ್ರ. ನ್ಯೂಯಾರ್ಕ್ ಮಾಜಿ ಗವರ್ನರ್, ಪ್ರಭಾವಿ ರಾಜಕೀಯ ಮುಖಂಡ ಆ್ಯಂಡೂಕೌಮೊ, ರಿಪಬ್ಲಿಕನ್ ಅಭ್ಯರ್ಥಿ ಕರ್ಟಿಸ್ ಸ್ಲಿವಾ ಅವರನ್ನು ಮಮ್ಹಾನಿಸೋಲಿಸಿದ್ದಾರೆ.
