Korean Boys: ಕೊರಿಯನ್ ಹುಡುಗರನ್ನು ಕಂಡರೆ ಹೆಚ್ಚಿನ ಭಾರತೀಯ ಹುಡುಗಿಯರಿಗಂತೂ ಎಲ್ಲಿಲ್ಲದ ಪ್ರೀತಿ. ನೋಡಲು ಕ್ಯೂಟ್ ಆಗಿರುತ್ತಾರೆ, ತೆಳ್ಳಗೆ ಬೆಳ್ಳಗೆ ಇರ್ತಾರೆ, ಮುಖದಲ್ಲಿ ಯಾವುದೇ ಕಲೆಗಳು ಇರುವುದಿಲ್ಲ, ಅಷ್ಟೇ ಏಕೆ ಗಡ್ಡ ಮೀಸೆಯೂ ಇರುವುದಿಲ್ಲ.. ಒಟ್ನಲ್ಲಿ ಏನು ಇರುವುದಿಲ್ಲ ಎಂಬುದು ಅವರ ಭಾವನೆ. ಹಾಗಾದ್ರೆ ಕೊರಿಯನ್ ಪುರುಷರಿಗೆ ಗಡ್ಡ ಮೀಸೆ ಏಕೆ ಬರಲ್ಲ?
ಕೊರಿಯನ್ ಪುರುಷರು ಗಡ್ಡ ಬೆಳೆಸುವುದಿಲ್ಲ ಎಂದು ಅನೇಕರು ಭಾವಿಸುತ್ತಾರೆ. ಆದರೆ ಅವರೂ ಗಡ್ಡ ಬೆಳೆಸುತ್ತಾರೆ. ಅವರ ಕೂದಲಿನ ಬೆಳವಣಿಗೆ ತುಂಬಾ ನಿಧಾನವಾಗಿರುತ್ತದೆ. ಗಡ್ಡ ಮತ್ತು ಮೀಸೆ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಹಾರ್ಮೋನ್ ಟೆಸ್ಟೋಸ್ಟೆರಾನ್, ಪೂರ್ವ ಏಷ್ಯಾದ ಪುರುಷರಲ್ಲಿ ದಕ್ಷಿಣ ಏಷ್ಯಾದ ಪುರುಷರಿಗಿಂತ ಕಡಿಮೆ ಇರುತ್ತದೆ. ಅದಕ್ಕಾಗಿಯೇ ಕೊರಿಯನ್ ಪುರುಷರಿಗೆ ಕೂದಲು ಕಡಿಮೆ ಇರುತ್ತದೆ.
ನಮ್ಮಲ್ಲಿ ಪುರುಷರು ಹೇಗೆ ಗಡ್ಡ ಮೀಸೆ ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಸ್ಮಾರ್ಟ್ ಆಗಿ ಕಾಣಲು ಪ್ರಯತ್ನ ಮಾಡುತ್ತಾರೆ ಅಂತೆಯೋ, ಕೊರಿಯನ್ ಪುರುಷರು ಕೂಡ ತಮ್ಮ ಸುಂದರ ತ್ವಚೆಯನ್ನು ಕಾಪಾಡಿಕೊಳ್ಳಲು ಮುಖದ ಮೇಲೆ ಗಡ್ಡ ಮೀಸೆ ಇರದಂತೆ ನೋಡಿಕೊಳ್ಳುತ್ತಾರೆ.
ಇನ್ನೂ ಕೊರಿಯಾದಲ್ಲಿ ಕೆಲಸದ ಸ್ಥಳದಲ್ಲಿ ಕ್ಲೀನ್ ಇರುವ ಮುಖವನ್ನು ಹೆಚ್ಚು ಗೌರವಿಸಲಾಗುತ್ತದೆ. ಕಾರ್ಪೊರೇಟ್ ಜಗತ್ತಿನಲ್ಲಿ ಅಥವಾ ಸಾರ್ವಜನಿಕ ಸೇವೆಯಲ್ಲಿ ಕೆಲಸ ಮಾಡುವ ಪುರುಷರಿಗೆ, ಗಡ್ಡವನ್ನು ಇಟ್ಟುಕೊಳ್ಳುವುದಕ್ಕಿಂತ ಟ್ರಿಮ್ ಮಾಡುವುದು ಹೆಚ್ಚು ವೃತ್ತಿಪರವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಅಲ್ಲಿನ ಅನೇಕ ಪುರುಷರು ಗಡ್ಡವನ್ನು ಬೆಳೆಸುವುದಿಲ್ಲ.
