Viral Video : ನಗರಗಳಲ್ಲಿರುವಂತಹ ಮಕ್ಕಳು ಪಾರ್ಟಿ, ಪಬ್ಬು, ಟ್ರಿಪ್ ಎಂದುಕೊಂಡು ಸುತ್ತಾಡಿ ಹೊತ್ತಿಲ್ಲದ ಹೊತ್ತಿನಲ್ಲಿ ಮನೆಗೆ ಬರುತ್ತಾರೆ. ಪೋಷಕರು ಎಷ್ಟೇ ಕನ್ವಿನ್ಸ್ ಮಾಡಿದರು ಕೂಡ ಅವರು ತಮ್ಮ ಬುದ್ಧಿಯನ್ನು ಬಿಡುವುದಿಲ್ಲ. ಅಂತೆಯೇ ಇಲ್ಲೊಬ್ಬ ಮಗ ತಡರಾತ್ರಿ ಮನೆಗೆ ಬಂದಿದ್ದು, ಆತನನ್ನು ಅವನ ಅಪ್ಪ ಕೈಯಲ್ಲಿ ಬೆಲ್ಟ್ ಹಿಡಿದುಕೊಂಡು, ಆರತಿ ಎತ್ತಿ ಮನೆ ಒಳಗೆ ಬಿಟ್ಟು ಕೊಂಡಿದ್ದಾರೆ. ಸದ್ಯ ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೌದು, ಯುವಕ ತಡವಾಗಿ ಮನೆಗೆ ಬಂದಿದ್ದು, ಆತನ ದಾರಿಯನ್ನೇ ಕಾಯುತ್ತಿದ್ದ ತಂದೆಯೂ ಮಾಡಿದ ಕೆಲಸ ನೋಡಿದ್ರೆ ನೀವು ಬಾಯಿಯ ಮೇಲೆ ಬೆರಳು ಇಡ್ತೀರಾ. ಈ ರೀತಿ ಕೂಡ ವೆಲ್ಕಮ್ ಸಿಗುತ್ತಾ ಎನ್ನುವ ಪ್ರಶ್ನೆಯೊಂದು ನಿಮ್ಮ ತಲೆಯಲ್ಲಿ ಮೂಡುತ್ತದೆ. ಫನ್ನಿ ಎನಿಸುವ ಈ ವಿಡಿಯೋ ಸದ್ಯ ವೈರಲ್ ಆಗಿದೆ.
@baxnal ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಅಪ್ಪನು ಆರತಿ ಹಿಡಿದು ಮಗನಿಗಾಗಿ ಕಾಯುತ್ತಿರುತ್ತಾರೆ. ಮನೆಯ ಸದಸ್ಯರು ಕೂಡ ಅಕ್ಕಪಕ್ಕ ನಿಂತಿರುತ್ತಾರೆ. ಈ ವೇಳೆ ಮಗ ಎಂಟ್ರಿ ಕೊಟ್ಟಾಗ ಅಪ್ಪ ಆರತಿ ಮಾಡಿ ಕೈಯಲ್ಲಿ ಬೆಲ್ಟ್ ಹಿಡಿದುಕೊಳ್ಳುತ್ತಾರೆ. ಮನೆ ಮಂದಿ ಎಲ್ಲ ಜೋರಾಗಿ ನಗುವುದನ್ನು ಕೂಡ ಈ ವಿಡಿಯೋದಲ್ಲಿ ಕಾಣಬಹುದು.
