Home » AI Video: ಎಐ ವಿಡಿಯೋ ಮೂಲಕ ಡಿಸಿಎಂ ಮಾನಹಾನಿ: ದೂರು ದಾಖಲು

AI Video: ಎಐ ವಿಡಿಯೋ ಮೂಲಕ ಡಿಸಿಎಂ ಮಾನಹಾನಿ: ದೂರು ದಾಖಲು

0 comments
D k Shivkumar

AI video: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಳ್ಳುತ್ತಿರುವಂತೆ ತೋರಿಸುವ ಎಐ ನಿರ್ಮಿತ ವಿಡಿಯೋ ಪೋಸ್ಟ್‌ ಕುರಿತು ʼಕನ್ನಡ ಚಿತ್ರರಂಗʼ ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯ ಬಳಕೆದಾರರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿರುವ ಕುರಿತು ವರದಿಯಾಗಿದೆ.

ಗಲಭೆ ಪ್ರಚೋದನೆ, ನಕಲಿ ದಾಖಲೆ ಸೃಷ್ಟಿ ಮತ್ತು ಸಾರ್ವಜನಿಕ ಅಶಾಂತಿ ಉಂಟು ಮಾಡುವ ಆರೋಪದ ಹಿನ್ನೆಲೆಯಲ್ಲಿ ಸದಾಶಿವನಗರ ಠಾಣೆಯಲ್ಲಿ ವಕೀಲ ದೀಪು ಸಿ.ಆರ್‌ ಅವರು ದೂರು ನೀಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ 2023 ರ ಸೆಕ್ಷನ್‌ ಪ್ರಕಾರ 192,336(4) ಮತ್ತು 353(2) ಅಡಿಯಲ್ಲಿ ಇನ್‌ಸ್ಟಾಗ್ರಾಂ ಖಾತೆಯ ಬಳಕೆದಾರರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ.

You may also like