Home » Belagavi : ಸರ್ಕಾರ ನಿಗದಿ ಮಾಡಿದಕ್ಕಿಂತ 50ರೂ ಹೆಚ್ಚಿಗೆ ಕೊಡ್ತೇವೆ – ಕಬ್ಬು ಬೆಳೆಗಾರರಿಗೆ ವೆಂಕಟೇಶ್ವರ ಕಾರ್ಖಾನೆ ಆಫರ್!!

Belagavi : ಸರ್ಕಾರ ನಿಗದಿ ಮಾಡಿದಕ್ಕಿಂತ 50ರೂ ಹೆಚ್ಚಿಗೆ ಕೊಡ್ತೇವೆ – ಕಬ್ಬು ಬೆಳೆಗಾರರಿಗೆ ವೆಂಕಟೇಶ್ವರ ಕಾರ್ಖಾನೆ ಆಫರ್!!

0 comments

Belagavi : ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಮಣಿದಿರುವ ಸರ್ಕಾರ ಒಂದು ಟನ್ ಕಬ್ಬಿಗೆ 3300 ಬೆಲೆ ನಿಗದಿ ಮಾಡಿ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ನಿಪ್ಪಾಣಿಯ ವೆಂಕಟೇಶ್ವರ ಕಬ್ಬು ಕಾರ್ಖಾನೆಯು ಕಬ್ಬು ಬೆಳೆಗಾರರಿಗೆ ಬಿಗ್ ಆಫರ್ ನೀಡಿದೆ.

ಹೌದು, ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೆಡಕಿಹಾಳ ಗ್ರಾಮದಲ್ಲಿರುವ ವೆಂಕಟೇಶ್ವರ ಸಕ್ಕರೆ ಕಾರ್ಖಾನೆ (Venkateshwara Sugar Factory) ಸಿಹಿ ಸುದ್ದಿ ನೀಡಿದೆ. ಒಂದು ಟನ್ ಕಬ್ಬಿಗೆ 3,350 ರೂ. ನೀಡುವುದಾಗಿ ಕಾರ್ಖಾನೆ ಹೇಳಿದೆ.

 ಕಬ್ಬು ಬೆಳೆಗಾರರ ಹೋರಾಟಕ್ಕೆ ಹಾಗೂ ಬೇಡಿಕೆಗೆ ತಲೆಬಾಗಿದ ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆಯ ಮಾಲೀಕರನ್ನೆಲ್ಲ ಕರೆಸಿ, ಸಭೆ ನಡೆಸಿ ಒಂದು ಟನ್ ಕಬ್ಬಿಗೆ 3,300 ರೂ. ನೀಡಬೇಕು ಎಂದು ರಾಜ್ಯ ಸರ್ಕಾರ ನಿಗದಿ ಮಾಡಿತ್ತು. ಇದೀಗ ಸ್ವರೂಪ ಮಹಾದೇವರಾವ್ ಮಹಾಡಿಕ್ ಎಂಬವರ ಒಡೆತನದಲ್ಲಿರುವ ವೆಂಕಟೇಶ್ವರ ಸಕ್ಕರೆ ಕಾರ್ಖಾನೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ 50 ರೂ. ಹೆಚ್ಚಿಗೆ ನೀಡಲು ಒಪ್ಪಿಗೆ ನೀಡಿದೆ. 

You may also like