Home » Mangalore: ಹೃದಯಾಘಾತ ಶಂಕೆ; ಲಾರಿಯಲ್ಲೇ ಮೃತಪಟ್ಟ ಚಾಲಕ

Mangalore: ಹೃದಯಾಘಾತ ಶಂಕೆ; ಲಾರಿಯಲ್ಲೇ ಮೃತಪಟ್ಟ ಚಾಲಕ

0 comments

Mangalore: ಲಾರಿಯಲ್ಲೇ ಚಾಲಕರೊಬ್ಬರು ಮೃತಪಟ್ಟ ಘಟನೆ ಗಂಗೊಳ್ಳಿ ತ್ರಾಸಿ ಗ್ರಾಮದ ಶ್ರೀ ಗಜಾನನ ಗ್ಯಾರೇಜ್‌ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.

ದಾವಣಗೆರೆಯ ಮನ್ಸೂರ್‌ ಅಲಿ (50) ಮೃತಪಟ್ಟ ವ್ಯಕ್ತಿ. ನ.6 ರಂದು ರಾತ್ರಿ ಲಾರಿ ಚಾಲನೆ ಮಾಡಿಕೊಂಡು ದಾವಣಗೆರೆಯಿಂದ ಮಂದಾರ್ತಿಯ ಲಕ್ಷ್ಮಿ ಫೀಡ್ಸ್‌ ಕಾರ್ಖಾನೆಗೆ ಬಂದ ಅವರು ದಾರಿ ಮಧ್ಯೆ ಲಾರಿ ನಿಲ್ಲಿಸಿ ಮಲಗಿದ್ದಾರೆ. ಈ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ನ.7 ರಂದು ಸಂಜೆ ಲಾರಿ ಬಳಿ ಹೋಗಿ ನೋಡಿದಾಗ ಮನ್ಸೂರ್‌ ಅಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಗಂಗೊಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ.

You may also like