Home » Hassan : ಕಾಡಾನೆ ಕಾರ್ಯಾಚರಣೆಯಲ್ಲಿ ‘ಭೀಮ’ನ ದಂತ ಮುರಿತ – ನೋವು ತಾಳಲಾರದೆ ಕಾಡಲ್ಲಿ ನಾಪತ್ತೆ

Hassan : ಕಾಡಾನೆ ಕಾರ್ಯಾಚರಣೆಯಲ್ಲಿ ‘ಭೀಮ’ನ ದಂತ ಮುರಿತ – ನೋವು ತಾಳಲಾರದೆ ಕಾಡಲ್ಲಿ ನಾಪತ್ತೆ

0 comments

Hassan : ಮಲೆನಾಡು ಭಾಗದ ಜನರಿಗೆ ವಿಪರೀತ ಕಾಟ ಕೊಡುತ್ತಿದ್ದ ಕಾಡಾನೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಎಲ್ಲರ ಅಚ್ಚುಮೆಚ್ಚಿನ ಭೀಮ ಆನೆಯ ದಂತ ಮುರಿಯಿದೆ. ಅಷ್ಟೇ ಅಲ್ಲದೆ ದಂತ ಮರಿಯುತ್ತಿದ್ದಂತೆ ಭೀಮನು ಕೂಡ ನಾಪತ್ತೆಯಾಗಿದ್ದಾನೆ.

ಹೌದು, ಹಾಸನ ಸಮೀಪದ ಅರಣ್ಯ ಪ್ರದೇಶದಲ್ಲಿ ನಡೆದ ಕಾಡಾನೆಗಳ ಕಾಳಗದಲ್ಲಿ ಕಾಡಾನೆ ಭೀಮನ ದಂತ ಮುರಿದಿದೆ ಎಂದು ತಿಳಿದುಬಂದಿದೆ. ತಾಲೂಕಿನ ಬಿಕ್ಕೋಡು ಹೋಬಳಿಯ ಜಗಬೋರನಹಳ್ಳಿ ಗ್ರಾಮದಲ್ಲಿ ಎರಡು ದೈತ್ಯ ಗಾತ್ರದ ಕಾಡಾನೆಗಳ ನಡುವೆ 1 ಗಂಟೆಗೂ ಹೆಚ್ಚು ಸಮಯ ಕಾದಾಟ ನಡೆದಿದ್ದು, ಇದರಲ್ಲಿ ಭೀಮಾ ಆನೆಯ ದಂತ ಮುರಿದಿದ್ದು, ಹೆಚ್ಚಿನ ಅನಾಹುತ ಅರಿತ ಅರಣ್ಯ ಇಲಾಖೆ ಅಧಿಕಾರಿಗಳ ಸಮಯಪ್ರಜ್ಞೆಯಿಂದ ಭೀಮಾನಿಗೆ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಕೊನೆಗೆ ದಂತ ಕಳೆದುಕೊಂಡ ಭೀಮ ಆನೆ ನಾಪತ್ತೆಯಾಗಿದೆ. ನಿನ್ನೆ ಸಂಜೆ ಕೊನೆಯದಾಗಿ ಕಾಣಿಸಿಕೊಂಡ ಭೀಮ ಬಳಿಕ ಯಾರ ಕಣ್ಣಿಗೂ ಸಹ ಕಾಣಿಸಿಲ್ಲ.

You may also like