Home » T20 World Cup : ಟಿ 20 ವಿಶ್ವಕಪ್ ಗೆ ಡೇಟ್ ಫಿಕ್ಸ್ – ಎಲ್ಲೆಲ್ಲಿ ನಡೆಯುತ್ತವೆ ಪಂದ್ಯಗಳು?

T20 World Cup : ಟಿ 20 ವಿಶ್ವಕಪ್ ಗೆ ಡೇಟ್ ಫಿಕ್ಸ್ – ಎಲ್ಲೆಲ್ಲಿ ನಡೆಯುತ್ತವೆ ಪಂದ್ಯಗಳು?

0 comments

T20 World Cup :ಬಹುನಿರೀಕ್ಷಿತ ಟಿ20 ವಿಶ್ವಕಪ್​​ಗೆ ದಿನಾಂಕ ನಿಗದಿಯಾಗಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಚುಟುಕು ಕ್ರಿಕೆಟ್ ವಿಶ್ವಕಪ್ ಫೆಬ್ರವರಿ 7ರಿಂದ ಶುರುವಾಗಲಿದೆ.

ಹೌದು, ಫೆಬ್ರವರಿಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಪಂದ್ಯಗಳನ್ನು ಆಡಲು ನಮ್ಮ ತಂಡ ಭಾರತಕ್ಕೆ ಬರಲ್ಲ ಎಂದು ಪಾಕ್‌ ಕ್ರಿಕೆಟ್‌ ಮಂಡಳಿ ತಿಳಿಸಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಚುಟುಕು ಕ್ರಿಕೆಟ್‌ ವಿಶ್ವಕಪ್‌ ಫೆಬ್ರವರಿ 7 ರಿಂದ ಶುರುವಾಗಲಿದ್ದು, ಮೊದಲ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಟಿ20 ವಿಶ್ವಕಪ್​​ನಲ್ಲಿ ಕಣಕ್ಕಿಳಿಯುವ ತಂಡಗಳು :
ಭಾರತ, ಶ್ರೀಲಂಕಾ, ಪಾಕಿಸ್ತಾನ್, ಬಾಂಗ್ಲಾದೇಶ್, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಐರ್ಲೆಂಡ್, ನ್ಯೂಝಿಲೆಂಡ್, ಅಫ್ಘಾನಿಸ್ತಾನ್, ಸೌತ್ ಆಫ್ರಿಕಾ, ಯುಎಸ್​ಎ, ಕೆನಡಾ, ನೆದರ್​ಲೆಂಡ್ಸ್, ಇಟಲಿ, ನಮೀಬಿಯಾ, ಝಿಂಬಾಬ್ವೆ, ನೇಪಾಳ, ಒಮಾನ್ ಮತ್ತು ಯುಎಇ.

ಪಂದ್ಯಾವಳಿಗಾಗಿ ಭಾರತದ ತಾಣಗಳಲ್ಲಿ ಅಹ್ಮದಾಬಾದ್‌, ಕೋಲ್ಕತಾ ಜೊತೆಗೆ ಮುಂಬೈ, ದೆಹಲಿ ಮತ್ತು ಚೆನ್ನೈ ಸೇರಿವೆ. ಇನ್ನು ಶ್ರೀಲಂಕಾದಲ್ಲಿ ಕೊಲಂಬೋ ಮತ್ತು ಕ್ಯಾಂಡಿ ತಾಣಗಳು ಸದ್ಯ ನಿಗದಿಯಾಗಿದ್ದು, ಇನ್ನೊಂದು ತಾಣ ಇನ್ನೂ ನಿರ್ಧಾರವಾಗಿಲ್ಲ. ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಕೂಡ ಪಾಲ್ಗೊಳ್ಳುವುದರಿಂದ ಅದರ ಪಂದ್ಯಗಳು ಲಂಕಾದಲ್ಲಿ ನಡೆಯಲಿವೆ.

You may also like