Delhi : ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೆಂಪು ಕೋಟೆ (Red Fort) ಬಳಿಯ ಮೆಟ್ರೋ ನಿಲ್ದಾಣದ ಗೇಟ್ ಬಳಿ ನಿಲ್ಲಿಸಿದ್ದ ಕಾರು ಸ್ಫೋಟವಾಗಿದೆ. ಹೀಗಾಗಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಇದರ ಬೆನ್ನಲ್ಲೇ ದೆಹಲಿಯ ಶಾಲಾ ಮಕ್ಕಳಿಗೆ ಮೂರು ದಿನ ಕ್ಲಾಸ್ ಹಾಗೂ ಇನ್ನುಳಿದ ದಿನ ಆನ್ಲೈನ್ ತರಗತಿಯನ್ನು ನಡೆಸಲು ಅಲ್ಲಿನ ಸರ್ಕಾರ ಸೂಚಿಸಿದೆ.
ಹೌದು, ಬೆಂಗಳೂರು ಸೇರಿದಂತೆ ದೇಶಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಶಾಲಾ ಮಕ್ಕಳಿಗೆ ಸರ್ಕಾರ ಹೈಬ್ರಿಡ್ ಮಾಡೆಲ್ ತರಗತಿ ಘೋಷಿಸಿದ್ದು ಐದನೇ ತರಗತಿವರೆಗಿನ ಮಕ್ಕಳಿಗೆ ಆನ್ಲೈನ್ ಹಾಗೂ ಆಫ್ ಲೈನ್ ಕ್ಲಾಸ್ ನಡೆಸಲು ಸರ್ಕಾರ ಸೂಚಿಸಿದೆ. ಅಂದಹಾಗೆ ದೆಹಲಿಯ ಶಾಲಾ ಮಕ್ಕಳಿಗೆ ಮಾತ್ರ ಇದು ಅನ್ವಯಿಸಲಿದೆ.
ಇನ್ನೂ ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ವಾಯು ಮಾಲಿನ್ಯ ವಿಪರೀತವಾಗುತ್ತಿದೆ. ಉಸಿರಾಡುವ ಗಾಳಿ ಕೂಡ ವಿಷಪೂರಿತವಾಗುತ್ತಿದೆ. ಸರ್ಕಾರದ ಹಲವು ಪ್ರಯತ್ನಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ವಾಹನಗಳ ಓಡಾಟ ಕಡಿಮೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಸೂಚಿಸಿದೆ. ಇದರ ಬೆನ್ನಲ್ಲೇ ಐದನೇ ತರಗತಿವರೆಗಿನ ಮಕ್ಕಳಿಗೆ ಹೈಬ್ರಿಡ್ ಮಾಡೆಲ್ ತರಗತಿ ಮಾಡಲು ಸೂಚಿಸಿದೆ. ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಕಾರಣ ಮಕ್ಕಳು ಸುರಕ್ಷಿತವಾಗಿ ಮನೆಯಿಂದಲೇ ತರಗತಿಗೆ ಹಾಜರಾಗುವಂತೆ ಆನ್ಲೈನ್ ಕ್ಲಾಸ್ ಮಾಡಲು ಸೂಚನೆ ನೀಡಿದೆ.
