Home » Sweet: ಮಕ್ಕಳ ಆರೋಗ್ಯಕ್ಕೆ ಬೆಲ್ಲಾ ಅಥವಾ ಸಕ್ಕರೆಯಲ್ಲಿ ಯಾವುದು ಬೆಸ್ಟ್?

Sweet: ಮಕ್ಕಳ ಆರೋಗ್ಯಕ್ಕೆ ಬೆಲ್ಲಾ ಅಥವಾ ಸಕ್ಕರೆಯಲ್ಲಿ ಯಾವುದು ಬೆಸ್ಟ್?

0 comments

Sweet: ಮಕ್ಕಳಿಗೆ ಸಿಹಿತಿಂಡಿ ಎಂದರೆ ವಿಪರೀತ ಆಸೆ. ಸಾಮಾನ್ಯವಾಗಿ ಎಲ್ಲಾ ಸಿಹಿ ತಿಂಡಿಗಳನ್ನು ಸಕ್ಕರೆ ಅಥವಾ ಬೆಲ್ಲದಿಂದಲೇ ತಯಾರಿಸಲಾಗುತ್ತದೆ. ಪೋಷಕರು ಮಕ್ಕಳ ಆರೋಗ್ಯದ ಕುರಿತು ಹೆಚ್ಚು ಗಮನ ನೀಡುವುದರಿಂದ ಮಕ್ಕಳ ಆರೋಗ್ಯಕ್ಕೆ ಬೆಲ್ಲ ಅಥವಾ ಸಕ್ಕರೆಯಲ್ಲಿ ಯಾವುದು ಬೆಸ್ಟ್ ಗೊತ್ತಾ?

ಮಕ್ಕಳಿಗೆ ಬೆಲ್ಲ ಅಥವಾ ಸಕ್ಕರೆಯಲ್ಲಿ ಯಾವುದು ಬೆಸ್ಟ್ ಎಂಬುದು ತುಂಬಾ ಸಾಮಾನ್ಯವಾದ ಪ್ರಶ್ನೆಯಾಗಿದ್ದು, ಹೆಚ್ಚಿನ ಪೋಷಕರಿಗೆ ಏನು ಮಾಡಬೇಕೆಂದು ತಿಳಿದಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬೆಲ್ಲ ಅಥವಾ ಸಕ್ಕರೆ ಮಕ್ಕಳಿಗೆ ಒಳ್ಳೆಯದೇ ಎಂಬುವುದರ ಬಗ್ಗೆ ಖ್ಯಾತ ವೈದ್ಯರಾದ ಡಾ.ರವಿ ಮಲಿಕ್ ಯಾವ ರೀತಿಯ ಸಲಹೆ ನೀಡಿದ್ದಾರೆಂದು ತಿಳಿಯಿರಿ.

ಬೆಲ್ಲ ಮತ್ತು ಸಕ್ಕರೆಗೆ ಹೋಲಿಸಿದರೆ, ಬೆಲ್ಲವನ್ನ ಮಕ್ಕಳಿಗೆ ನೀಡಬಹುದು, ಆದರೆ ಸಣ್ಣ ಪ್ರಮಾಣದಲ್ಲಿ. ಸಕ್ಕರೆಯೊಂದಿಗೆ ಬೆಲ್ಲವು ಕಬ್ಬಿಣ ಮತ್ತು ಮೆಗ್ನೀಸಿಯಮ್‌ನಂತಹ ಖನಿಜಗಳನ್ನ ಸಹ ಹೊಂದಿರುತ್ತದೆ, ಇದು ಮಕ್ಕಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎನ್ನುತ್ತಾರೆ ವೈದ್ಯರು.

ಸಕ್ಕರೆಯ ಅಡ್ಡಪರಿಣಾಮಗಳು
ಸಕ್ಕರೆಯಲ್ಲಿ ಹೆಚ್ಚಿನ ಕ್ಯಾಲೋರಿಗಳಿದ್ದು, ಇದು ಮಕ್ಕಳ ತೂಕವನ್ನ ಹೆಚ್ಚಿಸಿ, ಬೊಜ್ಜಿನ ಅಪಾಯವನ್ನ ಹೆಚ್ಚಿಸುತ್ತದೆ. ಹೆಚ್ಚು ಸಕ್ಕರೆ ತಿನ್ನುವುದರಿಂದ ಮಕ್ಕಳ ಮನೋಸ್ಥೈರ್ಯ ಮತ್ತು ಮನಸ್ಥಿತಿಯಲ್ಲಿ ಏರುಪೇರು ಉಂಟಾಗಬಹುದು. ಜೊತೆಗೆ ಸಕ್ಕರೆ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನ ಹೆಚ್ಚಿಸುತ್ತದೆ, ಇದರಿಂದ ಶಕ್ತಿಯ ಹಠಾತ್ ಕುಸಿತ ಉಂಟಾಗುತ್ತದೆ, ಇದು ಮಗುವನ್ನ ಕಿರಿಕಿರಿ ಅಥವಾ ದಣಿದಂತೆ ಮಾಡುತ್ತದೆ.

ಅಲ್ಲದೆ ಸಕ್ಕರೆ ಹಲ್ಲುಗಳಿಗೆ ಅಂಟಿಕೊಳ್ಳುತ್ತದೆ ಮತ್ತು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನ ಉತ್ತೇಜಿಸುತ್ತದೆ, ಇದು ಹಲ್ಲಿನ ಕೊಳೆತ ಮತ್ತು ಹಲ್ಲುಕುಳಿಗಳಿಗೆ ಕಾರಣವಾಗಬಹುದು. ಹೆಚ್ಚು ಸಕ್ಕರೆ ಸೇವಿಸುವುದರಿಂದ ದೀರ್ಘಾವಧಿಯಲ್ಲಿ ಹೃದಯದ ಆರೋಗ್ಯಕ್ಕೆ ಹಾನಿಯಾಗಬಹುದು. ಇದು ರಕ್ತದಲ್ಲಿ ಟ್ರೈಗ್ಲಿಸರೈಡ್‌ಗಳು ಮತ್ತು ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನ ಹೆಚ್ಚಿಸಬಹುದು. ಇಷ್ಟಲ್ಲದೆ ಮಕ್ಕಳಲ್ಲಿ ಅತಿಯಾದ ಸಕ್ಕರೆ ಸೇವನೆಯು ಮನಸ್ಥಿತಿ ಬದಲಾವಣೆಗಳು, ಆಕ್ರಮಣಶೀಲತೆ ಮತ್ತು ಏಕಾಗ್ರತೆಯ ತೊಂದರೆಗೆ ಕಾರಣವಾಗಬಹುದು.

You may also like