Home » Kukke Subrahmanya: ಸುಬ್ರಹ್ಮಣ್ಯ ಚಂಪಾಷಷ್ಠಿ ಜಾತ್ರಾ ಮಹೋತ್ಸವ: ನ.14ರಿಂದ ಡಿ.2ರ ವರೆಗೆ ಸರ್ಪಸಂಸ್ಕಾರ ಸೇವೆ ಸ್ಥಗಿತ

Kukke Subrahmanya: ಸುಬ್ರಹ್ಮಣ್ಯ ಚಂಪಾಷಷ್ಠಿ ಜಾತ್ರಾ ಮಹೋತ್ಸವ: ನ.14ರಿಂದ ಡಿ.2ರ ವರೆಗೆ ಸರ್ಪಸಂಸ್ಕಾರ ಸೇವೆ ಸ್ಥಗಿತ

0 comments
Kukke Subrahmanya

Kukke Subrahmanya: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ನವೆಂಬರ್ 16 ರಿಂದ ಡಿಸೆಂಬರ್ 2 ರವರೆಗೆ ಅದ್ದೂರಿಯಾಗಿ ನೆರವೇರಲಿದೆ. ಈ ಜಾತ್ರಾ ಅವಧಿಯಲ್ಲಿ ದೇವಸ್ಥಾನದ ಪ್ರಮುಖ ಸೇವೆಗಳಾದ ಸರ್ಪಸಂಸ್ಕಾರ ಮತ್ತು ಸಂಜೆಯ ಆಶ್ಲೇಷ ಬಲಿ ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯವಿರಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.ನವೆಂಬರ್ 14 ರಿಂದ ಡಿಸೆಂಬರ್ 2 ರವರೆಗೆ ಶ್ರೀ ದೇವಳದ ಪ್ರಧಾನ ಸೇವೆಗಳಲ್ಲಿ ಒಂದಾದ ಸರ್ಪಸಂಸ್ಕಾರ ಸೇವೆ ಲಭ್ಯವಿರುವುದಿಲ್ಲ. ನವೆಂಬರ್ 13 ರಂದು ಆರಂಭವಾದ ಸರ್ಪಸಂಸ್ಕಾರ ಸೇವೆಗಳು ನವೆಂಬರ್ 14 ಕ್ಕೆ ಕೊನೆಗೊಳ್ಳಲಿವೆ. ನವೆಂಬರ್ 14 ರಿಂದಲೇ ಸೇವೆಗಳು ಪುನರಾರಂಭಗೊಳ್ಳುವುದಿಲ್ಲ. ನವೆಂಬರ್ 15 ಶನಿವಾರ ಏಕಾದಶಿ ಮತ್ತು ಮೂಲಮ್ಮತ್ತಿಕಾ ಪ್ರಸಾದ ವಿತರಣೆ, ಹಾಗೂ ನವೆಂಬರ್ 16 ರಂದು ಕೊಪ್ಪರಿಗೆ ಏರಿ ಜಾತ್ರಾ ಮಹೋತ್ಸವ ಆರಂಭವಾಗುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಡಿಸೆಂಬರ್ 2 ರಂದು ಕೊಪ್ಪರಿಗೆ ಇಳಿಯುವವರೆಗೆ ಸರ್ಪಸಂಸ್ಕಾರ ಇರುವುದಿಲ್ಲ. ಭಕ್ತರು ಡಿಸೆಂಬರ್ 3, ಬುಧವಾರದಿಂದ ಸರ್ಪಸಂಸ್ಕಾರ ಸೇವೆಯನ್ನು ಪುನರಾರಂಭಿಸಬಹುದು.ಜಾತ್ರಾ ಪ್ರಮುಖ ದಿನಗಳಲ್ಲಿ ಸೇವೆಗಳ ವ್ಯತ್ಯಯ:ಲಕ್ಷದೀಪೋತ್ಸವ(ನ 19), ಚೌತಿ(ನ.24), ಪಂಚಮಿ(ನ.25) ದಿನದಂದು ರಾತ್ರಿ ಹೊತ್ತಿನಲ್ಲಿ ಪ್ರಾರ್ಥನೆ ಸೇವೆ ಇರುವುದಿಲ್ಲ. ಚಂಪಾಷಷ್ಠಿ (ನ.26) ದಿನದಂದು ಮಧ್ಯಾಹ್ನ ಪ್ರಾರ್ಥನೆ ಸೇವೆ ನಡೆಯುವುದಿಲ್ಲ. ಅಲ್ಲದೆ ಚಂಪಾಷಷ್ಠಿ ದಿನ ಆಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆ, ಸೇವೆಗಳು ನೆರವೇರುವುದಿಲ್ಲ. ಲಕ್ಷದೀಪೋತ್ಸವ(ನ. 19), ಚೌತಿ(ನ.24), ಪಂಚಮಿ(ನ.25)ಚಂಪಾಷಷ್ಠಿ (ನ.26) ಮತ್ತು ಕೊಪ್ಪರಿಗೆ ಇಳಿಯುವ ಮಹಾಸಂಪ್ರೋಕ್ಷಣೆಯ ದಿನ (ಡಿ.02)ದಂದು ಪಂಚಾಮೃತ ಮಹಾಭಿಷೇಕ ಸೇವೆ ನಡೆಯುವುದಿಲ್ಲ.ನ.16ರಿಂದ ಡಿ.02ರ ತನಕ ಸಾಯಂಕಾಲದ ಆಶ್ಲೇಷ ಬಲಿ ಸೇವೆ ನೆರವೇರುವುದಿಲ್ಲ.ಎಂದಿನಂತೆ ನಡೆಯಲಿರುವ ಇತರ ಸೇವೆಗಳು:ಚಂಪಾಷಷಿ ಜಾತ್ರೋತ್ಸವವು ನ.16ರಿಂದ ಡಿ.02ರ ತನಕ ನೆರವೇರಲಿದ್ದು ಜಾತ್ರೋತ್ಸವದ ಪ್ರಧಾನ ದಿನಗಳಾದ ಲಕ್ಷದೀಪ, ಚೌಕಿಪಂಚಮಿ ಮತ್ತು ಷಷ್ಠಿಯಂದು ಮಾತ್ರ ಕೆಲವೊಂದು ಸೇವೆಗಳನ್ನು ನೆರವೇರಿಸಲು ಭಕ್ತರಿಗೆ ಅವಕಾಶಗಳು ಇರುವುದಿಲ್ಲ. ಆದರೆ ಇತರ ದಿನಗಳಲ್ಲಿ ಆಶ್ಲೇಷಬಲಿ, ಪಂಚಾಮೃತ ಮಹಾಭಿಷೇಕ, ಶೇಷಸೇವೆ, ಕಾರ್ತಿಕಪೂಜೆ, ಮಹಾಪೂಜೆ, ತುಲಾಭಾರ, ನಾಗಪ್ರತಿಷ್ಠೆ. ಉತ್ಸವ, ರಥೋತ್ಸವ ಮೊದಲಾದ ಸೇವೆಗಳು ನೆರವೇರಲಿದೆ ಸರ್ಪಸಂಸ್ಕಾರ ಮತ್ತು ಸಂಜೆಯ ಆಶ್ಲೇಷ ಬಲಿ ಸೇವೆಗಳು ಮಾತ್ರ ಡಿ.02ರ ತನಕ ನೆರವೇರುವುದಿಲ್ಲ.

You may also like