Home » Child: ಕಾರ್ ರಿವರ್ಸ್ ತೆಗೆಯುವಾಗ ಅನಾಹುತ: ಪುಟಾಣಿ ಮಗು ಸಾ*ವು!

Child: ಕಾರ್ ರಿವರ್ಸ್ ತೆಗೆಯುವಾಗ ಅನಾಹುತ: ಪುಟಾಣಿ ಮಗು ಸಾ*ವು!

0 comments
Tragic Story

Child: ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸ್‌ ಠಾಣಾ ತೋಟದಗುಡ್ಡದಹಳ್ಳಿ ಬೆನಕ ಲೇಔಟ್‌ನಲ್ಲಿ ಕಾರು (Car) ರಿವರ್ಸ್ ತೆಗೆಯುವ ಸಂದರ್ಭ ಮಗುವಿನ ಮೇಲೆ ಹರಿದು ಮಗು (Child) ಸಾವನ್ನಪ್ಪಿದ ದುರಂತ ನಡೆದಿದೆ.ಮೋಹನ್ ದಂಪತಿಯ ಒಂದೂವರೆವರ್ಷದ ನೂತನ್ ಕಾರು ಚಕ್ರದಡಿಗೆ ಸಿಲುಕಿ ಮೃತಪಟ್ಟ ಮಗುವಾಗಿದೆ. ಮೋಹನ್ ಅಕ್ಕ ದೇವಿಕಾ ಹಾಗೂ ಭಾವ ಮುನೇಶ್ ಶನಿವಾರ ಬೆಳಗ್ಗೆ ಮೋಹನ್ ಅವರ ಮನೆಗೆ ಬಂದಿದ್ದರು. ಮನೆಯಿಂದ ಹೊರಟು ಕಾರನ್ನು ರಿವರ್ಸ್‌ ತೆಗೆಯುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಮಗುವನ್ನು ಗಮನಿಸದೇ ಕಾರು ಚಲಾಯಿಸಿದ ಪರಿಣಾಮ ಮಗು ಸ್ಥಳದಲ್ಲೆ ಮೃತಪಟ್ಟಿದೆ. ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಎನ್‌ಎಸ್ 106 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

You may also like