Jalebi: ಜಿಲೇಬಿ ಭಾರತದ ಅತ್ಯಂತ ಪ್ರಮುಖ ಸಿಹಿ ತಿಂಡಿಗಳಲ್ಲಿ ಒಂದು. ದೇಶದ ಯಾವುದೇ ಮೂಲೆಗಳಿಗೆ ತೆರಳಿದರೂ ನಿಮಗೆ ಈ ಜಿಲೇಬಿ ಬಾಯಿ ಸಿಹಿ ಮಾಡಲು ಸಿಗುತ್ತದೆ. ಎಲ್ಲ ಭಾಷೆಗಳಲ್ಲೂ ಸಾಮಾನ್ಯವಾಗಿ ಜಿಲೇಬಿ ಎಂಬುದಾಗಿಯೇ ಇದನ್ನು ಕರೆಯುತ್ತಾರೆ. ಅಂತೆಯೇ ಇಂಗ್ಲಿಷ್ನಲ್ಲಿ ಕೂಡ ಇದುವರೆಗೂ ಕರೆಯುವಾಗ ಅಥವಾ ಬರೆಯುವಾಗ ಜಿಲೇಬಿ ಎಂದೆಯೇ ಸಂಬೋಧಿಸಲಾಗುತ್ತಿತ್ತು. ಆದರೆ ಇಂಗ್ಲಿಷ್ ನಲ್ಲಿ ಜಿಲೇಬಿಗೆ ಬೇರೆ ಹೆಸರಿದೆ ಎಂಬುದು ನಿಮಗೆ ಗೊತ್ತೇ?
ಹೌದು, ಜಿಲೇಬಿಗೆ ಇಂಗ್ಲಿಷ್‌ನಲ್ಲಿ ಏನೆಂದು ಕರೆಯುತ್ತಾರೆ ಅಂತಾ ಬಹುತೇಕರಿಗೆ ಗೊತ್ತಿಲ್ಲ. ಜಿಲೇಬಿಯನ್ನು ಇಂಗ್ಲಿಷ್‌ನಲ್ಲಿ ‘ಸ್ವೀಟ್ ಪ್ರೆಟ್ಜೆಲ್’ ಅಥವಾ ‘ಕಾಯಿಲ್ಡ್ ಫನಲ್ ಕೇಕ್’ ಎಂದು ಕರೆಯಲಾಗುತ್ತದೆ. ಕೆಲವರು ಇದನ್ನು ‘ಇಂಡಿಯನ್ ಸಿರಪ್-ಕೋಟೆಡ್ ಡೆಸರ್ಟ್’ ಎಂದೂ ಕರೆಯುತ್ತಾರೆ. ಇದು ಹೊರಗೆ ಕುರುಕಲು ಮತ್ತು ಒಳಗೆ ರಸಭರಿತವಾಗಿರುತ್ತದೆ ಎಂಬ ಅರ್ಥವನ್ನು ನೀಡುತ್ತದೆ.
ಅಂದಹಾಗೆ ಜಿಲೇಬಿಯ ಮೂಲ ಹೆಸರು ‘ಜುಲಾಬಿಯಾ’ ಅಥವಾ ‘ಜಲಾಬಿಯಾ’. ಇದನ್ನು ಮಧ್ಯಪ್ರಾಚ್ಯದಲ್ಲಿ ತಯಾರಿಸಲಾಗುತ್ತಿತ್ತು. ನಂತರ, ಈ ಸಿಹಿ ಭಾರತಕ್ಕೆ ಬಂದು ಇನ್ನಷ್ಟು ವಿಶೇಷವಾಗಿದೆ. ಭಾರತ ಮಾತ್ರವಲ್ಲ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಆಫ್ರಿಕನ್ ದೇಶಗಳಲ್ಲಿಯೂ ಬಹಳ ಜನಪ್ರಿಯವಾಗಿದೆ.
