Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12 ಉತ್ತಮ ರೀತಿಯಾಗಿ ಪ್ರದರ್ಶನ ಕಾಣುತ್ತಿರುವ ನಡುವೆಯೇ ಎಲ್ಲರ ನೆಚ್ಚಿನ ಸ್ಪರ್ಧಿಯಾಗಿರುವಾಗ ಗಿಲ್ಲಿ ನಟನ ವಿರುದ್ಧ ಇದೀಗ ದೂರು ದಾಖಲಾಗಿದೆ.
ಕೆಲವು ವಾರಗಳ ಹಿಂದೆ ಗಿಲ್ಲಿ ನಟ ಅವರು, ತನ್ನ ಸಹಸ್ಪರ್ಧಿಯಾದ ರಿಶಾ ಅವರ ಬಟ್ಟೆಗಳನ್ನು ಮಾತಿನ ಚಕಮಕಿಯ ಕಾರಣಕ್ಕಾಗಿ ಬಾತ್ರೂಮ್ಗೆ ತಂದು ಇರಿಸಿದ್ದರು. ನಂತರ ರಿಷಾ ಅವರು ಹೊರಬಂದು ದೊಡ್ಡ ರಂಪ ರಾಮಾಯಣ ಕೂಡ ನಡೆದಿತ್ತು. ಕೊನೆಗೆ ವೀಕೆಂಡ್ ನಲ್ಲಿ ಕಿಚ್ಚನ ಪಂಚಾಯಿತಿಯಲ್ಲಿ ಈ ಈ ಬಗ್ಗೆ ಸುದೀಪ ಅವರು ಇಬ್ಬರಿಗೂ ಕ್ಲಾಸ್ ತೆಗೆದುಕೊಂಡು ವಾರ್ನಿಂಗ್ ಮಾಡಿದ್ದರು. ಅಲ್ಲಿಗೆ ಈ ವಿಚಾರ ಬಗ್ಗೆ ಹರಿದಿತ್ತು.
ಆದರೆ ಇದೀಗ ಮಹಿಳಾ ಆಯೋಗಕ್ಕೆ ಈ ವಿಚಾರವಾಗಿ ಗಿಲ್ಲಿ ನಟನ ವಿರುದ್ಧ ದೂರು ದಾಖಲಾಗಿದೆ. ಈ ಕುರಿತಾಗಿ ವಿಡಿಯೋ ಫೊಟೇಜ್ ಅನ್ನು ಮಹಿಳಾ ಆಯೋಗವು ಚೆಕ್ ಮಾಡಿದ್ದು, ಯಾವುದೇ ಸಾಕ್ಷಾಧಾರಗಳು ಸಿಗದ ಕಾರಣ ಕೇಸ್ ಅನ್ನು ಲೀಗಲ್ ಸೆಲ್ ಗೆ ವರ್ಗಾಯಿಸಿದೆ.
