Home » ಲಾಲುಗೆ ಕೊಳಕು ಕಿಡ್ನಿ ದಾನ ಮಾಡಿದ್ರಾ ಪುತ್ರಿ? ಚರ್ಚೆಗೆ ಸಿದ್ದ ಎಂದ ರೋಹಿಣಿ!

ಲಾಲುಗೆ ಕೊಳಕು ಕಿಡ್ನಿ ದಾನ ಮಾಡಿದ್ರಾ ಪುತ್ರಿ? ಚರ್ಚೆಗೆ ಸಿದ್ದ ಎಂದ ರೋಹಿಣಿ!

0 comments

ಪಾಟ್ನಾ: ಅಪ್ಪ ಲಾಲು ಪ್ರಸಾದ್ ಯಾದವ್ ಅವರಿಗೆ ಉದ್ರಿ ರೋಹಿಣಿ ಆಚಾರ್ಯ ತನ್ನ ಒಂದು ಕಿಡ್ನಿ ದಾನ ನೀಡಿ ಬದುಕಿಸಿಕೊಂಡದ್ದು ಎಲ್ಲರಿಗೂ ತಿಳಿದೇ ಇದೆ. ಪ್ರತಿಷ್ಠಿತ ಕುಟುಂಬದ ಮಗಳು ತನ್ನದೇ ಕಿಡ್ನಿ ನೀಡಿ, ಅದೂ ತನ್ನ ಗಂಡನ ಮತ್ತು ಮನೆಯವರ ವಿರೋಧದ ಮಧ್ಯೆ, ಅಪ್ಪನನ್ನು ಉಳಿಸಿಕೊಂಡದ್ದು ಮಾದರಿ ಎನ್ನಿಸಿತ್ತು. ಆದರೆ ಇತ್ತೀಚೆಗೆ ನಡೆದ ಬಿಹಾರ ಚುನಾವಣೆಯ ಸಂದರ್ಭದ ಕೊಳಕು ರಾಜಕೀಯ ಅವನ ಮನೆಯನ್ನು ಹಾಳುಗೆಡವಿತ್ತು.

ಲಾಲು ಪ್ರಸಾದ್ ಯಾದವ್ ಮನೆ ಜಗಳ ಮುಂದುವರಿದಿದ್ದು, ‘ನನ್ನ ತಂದೆ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಕೊಳಕು ಮೂತ್ರ ಪಿಂಡ ದಾನ ನೀಡಿದ್ದೇನೆ ಎಂದು ಆರೋಪಿಸಿದವರ ಜತೆ ಬಹಿರಂಗ ಚರ್ಚೆಗೆ ಸಿದ್ಧವಿದ್ದೇನೆ’ ಎಂದು ಲಾಲು ಪುತ್ರಿ ರೋಹಿಣಿ ಆಚಾರ್ ಸವಾಲು ಹಾಕಿದ್ದಾರೆ. ‘ನನ್ನ ವಿರುದ್ಧ ಈ ಆರೋಪಿಸಿದವರು, ಅಂಗಾಂಗಗಳ ಅಗತ್ಯವಿರುವ ಲಕ್ಷಾಂತರ ರೋಗಿಗಳಿಗೆ ಲಾಲುಜೀ ಹೆಸರಿನಲ್ಲಿ ತಮ್ಮ ಕಿಡ್ನಿಗಳನ್ನು ದಾನ ಮಾಡಲಿ ನೋಡೋಣ’ ಎಂದೂ ಅವರು ಸವಾಲೆಸೆದಿದ್ದಾರೆ.
ಮಗಳ ಮೂತ್ರಪಿಂಡವನ್ನು ಕೊಳಕು ಎಂದವರು, ತಮ್ಮ ಮೂತ್ರಪಿಂಡಗಳನ್ನು ದಾನ ಮಾಡಿ ಮಾದರಿಯಾಗಲಿ’ಎಂದು ಲಾಲೂ ಪುತ್ರಿ ಟ್ವಿಟ್ ಮಾಡಿದ್ದಾರೆ.

You may also like