Home » Mantralayam: ಮಂತ್ರಾಲಯ ರಾಯರ ಮಠದ ಹುಂಡಿ ಹಣ ಎಣಿಕೆ; 34 ದಿನದಲ್ಲಿ ಸಂಗ್ರಹವಾದ ಭಾರೀ ಮೊತ್ತದ ಕಾಣಿಕೆ!

Mantralayam: ಮಂತ್ರಾಲಯ ರಾಯರ ಮಠದ ಹುಂಡಿ ಹಣ ಎಣಿಕೆ; 34 ದಿನದಲ್ಲಿ ಸಂಗ್ರಹವಾದ ಭಾರೀ ಮೊತ್ತದ ಕಾಣಿಕೆ!

0 comments

Mantralayam: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯವಾಗಿದ್ದು, ಕಳೆದ 34 ದಿನದಲ್ಲಿ ದಾಖಲೆಯ 5.41 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ.

ಕಾರ್ತಿಕ ಮಾಸ ಹಿನ್ನೆಲೆ ಗುರುರಾಘವೇಂದ್ರ ಸ್ವಾಮಿ ಮಠಕ್ಕೆ ಹರಿದು ಬಂದಿದ್ದ ಭಕ್ತ ಸಾಗರದಿಂದ ಮಠಕ್ಕೆ ಕೋಟ್ಯಾಂತರ ರೂಪಾಯಿ ಕಾಣಿಕೆ ಬಂದಿದೆ. ಸಂಗ್ರಹವಾದ ಕಾಣಿಕೆಯಲ್ಲಿ 5,26,89,128 ರೂ. ಕರೆನ್ಸಿ ನೋಟುಗಳು, 14,58,100 ರೂಪಾಯಿ ನಾಣ್ಯಗಳು ಸಂಗ್ರಹವಾಗಿವೆ. 80 ಗ್ರಾಂ ಚಿನ್ನ, 1,610 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ.

ಮಂತ್ರಾಲಯ ರಾಯರ ಮಠದಲ್ಲಿ ನಡೆಸಲಾದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ, ಕರ ಸೇವಕರು ಭಾಗವಹಿಸಿದ್ದರು.

You may also like