Home » Main ಬಾಡಿಗೆ ಮನೆ ಡೆಪಾಸಿಟ್ 2 ತಿಂಗಳ ರೆಂಟ್ ಮಾತ್ರ- sub ಮಾಲೀಕರಿಗೂ ಅನುಕೂಲ, ಬರ್ತಿದೆ ಹೊಸ ಕಾನೂನು!

Main ಬಾಡಿಗೆ ಮನೆ ಡೆಪಾಸಿಟ್ 2 ತಿಂಗಳ ರೆಂಟ್ ಮಾತ್ರ- sub ಮಾಲೀಕರಿಗೂ ಅನುಕೂಲ, ಬರ್ತಿದೆ ಹೊಸ ಕಾನೂನು!

0 comments
House Rent Allowance Hike

ನವದೆಹಲಿ: ಬಾಡಿಗೆ ಮನೆಗಳಲ್ಲಿ ಇರುವವರು ಹಾಗೂ ಆ ಮನೆ ಅಥವಾ ಅಪಾರ್ಟ್ ಮೆಂಟ್ ಗಳ ಮಾಲೀಕರ ನಡೆಯುವ ಹಣದ ವ್ಯವಹಾರಗಳ ವ್ಯವಹಾರಗಳಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಹೊಸದಾಗಿ ಬಾಡಿಗೆ ನಿಯಮಗಳನ್ನು ಜಾರಿಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಅದಕ್ಕಾಗಿ 2025ರ ಬಾಡಿಗೆ ನಿಯಮಗಳನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಮಾದರಿ ಬಾಡಿಗೆ ಕಾಯ್ದೆ (ಎಂಟಿಎ) ಹಾಗೂ ಕೇಂದ್ರ ಬಜೆಟ್ ನಲ್ಲಿ ಬಾಡಿಗೆದಾರರಿಗೆ ನೀಡಲಾಗಿರುವ ಕೆಲವು ರಿಯಾಯಿತಿಗಳಿಗೆ ಅನುಸಾರವಾಗಿ ಈ ಹೊಸ ನಿಯಮಗಳನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

ಬಾಡಿಗೆದಾರರಿಗೆ ಏನು ಅನುಕೂಲ?
ಈ ಹೊಸ ನಿಯಮಗಳ ಪ್ರಕಾರ, ಬಾಡಿಗೆ ಕರಾರಿಗೆ ಸಹಿ ಹಾಕಿದ ಎರಡು ತಿಂಗಳುಗಳೊಳಗಾಗಿ ಆ ಕರಾರು ಪತ್ರವನ್ನು ಆಯಾ ವಲಯದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು. ಇಲ್ಲವೇ, ಆಯಾ ರಾಜ್ಯ ಸರ್ಕಾರಗಳ ಅಧಿಕೃತ ಆನ್ ಲೈನ್ ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಈ ನಿಯಮವನ್ನು ಮೀರಿದರೆ ಮನೆಗಳ ಮಾಲೀಕರ ಮೇಲೆ 5,000 ರೂ. ದಂಡವನ್ನು ವಿಧಿಸಲಾಗುತ್ತದೆ.

ಕೆಲವು ರಾಜ್ಯಗಳಲ್ಲಿ ಅಥವಾ ನಗರಗಳಲ್ಲಿ ಮನೆ ಬಾಡಿಗೆ ಎಷ್ಟು ನಿಗದಿಯಾಗುತ್ತೋ ಅದರ 10 ತಿಂಗಳ ಬಾಡಿಗೆಯನ್ನು ಮನೆಯ ಮಾಲೀಕರಲ್ಲಿ ಡೆಪಾಸಿಟ್ (ಅಡ್ವಾನ್ಸ್ ) ಇಡಬೇಕೆಂಬ ಅಘೋಷಿತ ನಿಯಮ ಜಾರಿಯಲ್ಲಿದೆ. ಇನ್ನು ಕೇವಲ 2 ತಿಂಗಳ ಬಾಡಿಗೆಯನ್ನು ಮಾತ್ರ ಮನೆ ಮಾಲೀಕರು ಪಡೆಯತಕ್ಕದ್ದು. ವಾಣಿಜ್ಯ ಬಳಕೆಗಾಗಿ ಕಟ್ಟಡವನ್ನು ಬಾಡಿಗೆಗೆ ಪಡೆದುಕೊಂಡಿದ್ದರೆ ಆರು ತಿಂಗಳ ಬಾಡಿಗೆಯನ್ನು ಅಡ್ವಾನ್ಸ್ ಪಡೆಯಬಹುದು.

11 ತಿಂಗಳ ಕರಾರು ಮುಗಿದ ಕೂಡಲೇ ಮನೆಯ ಬಾಡಿಗೆಯನ್ನು ಏರಿಸಿದ ನಂತರ ಕಡ್ಡಾಯವಾಗಿ ಹೊಸ ಕರಾರು ಪತ್ರ ಮಾಡಿಸಬೇಕು. ಅದನ್ನು ಸಹ ಉಪ ನೋಂದಾವಣಿ ಕಚೇರಿಗಳಲ್ಲಿ ಅಥವಾ ಆನ್ ಲೈನ್ ಮೂಲಕ ನೋಂದಾವಣಿ ಮಾಡಿಸುವುದು ಕಡ್ಡಾಯವಾಗಿರಲಿದೆ.

ಇನ್ನು, ಬಾಡಿಗೆದಾರರನ್ನು ಮನೆಯಿಂದ ಬಿಡಿಸಬೇಕಾದರೆ ಮೂರು ತಿಂಗಳಿಗೂ ಮುನ್ನವೇ ಸೂಚಿಸಬೇಕು. ಹಾಗೇನಾದರೂ ಏಕಾಏಕಿ ಮನೆ ಬಿಡಬೇಕೆಂದು ಸೂಚಿಸಿದರೆ ಅದು ನಿಯಮಗಳ ಉಲ್ಲಂಘನೆಯಾಗುತ್ತದೆ. ಬಾಡಿಗೆದಾರರು ಅಥವಾ ಮನೆ ಮಾಲೀಕರ ನಡುವಿನ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಲು ವಿಶೇಷ ಬಾಡಿಗೆ ನ್ಯಾಯಾಲಯಗಳನ್ನು ಅಥವಾ ನ್ಯಾಯಾಧೀಕರಣಗಳನ್ನು ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಲಾಗುತ್ತದೆ.

ಮನೆ ಮಾಲೀಕರಿಗೆ ಏನು ಅನುಕೂಲ?
ಈಗಾಗಲೇ ಬಜೆಟ್ ನಲ್ಲಿ ಸ್ಥಿರಾಸ್ತಿಗಳಿಂದ ಬರುವ ಬಾಡಿಗೆಗಳ ಆದಾಯ ಸಾಮಾನ್ಯವಾಗಿ ತೆರಿಗೆ ಹಾಕಲಾಗುತ್ತದೆ. ಈ ಮೊದಲು ವಾರ್ಷಿಕ 2.4 ಲಕ್ಷ ರೂ.ಗಳ ಮೇಲ್ಪಟ್ಟ ಬಾಡಿಗೆ ಹಣಕ್ಕೆ ತೆರಿಗೆ ಬೀಳಲಾಗುತ್ತಿತ್ತು. ಈಗ ಅದರ ಮಿತಿಯನ್ನು 4 ಲಕ್ಷ ರೂ.ಗಳವರೆಗೆ ಏರಿಸಲಾಗಿದೆ. ಹಾಗಾಗಿ, ಮನೆಗಳ ಮಾಲೀಕರು ನಿರಾತಂಕವಾಗಿ ಬಾಡಿಗೆ ಕರಾರು ಪತ್ರಗಳನ್ನು ನೋಂದಾಯಿಸಬಹುದು.

You may also like