Home » Toilet cleaning tips: ಟಾಯ್ಲೆಟ್‌ ಕಮೋಡ್‌ ಬಣ್ಣ ಹಳದಿ ಆಗಿದ್ರೆ ಜಸ್ಟ್ ಈ ರೀತಿ ಮಾಡಿ ಸಾಕು

Toilet cleaning tips: ಟಾಯ್ಲೆಟ್‌ ಕಮೋಡ್‌ ಬಣ್ಣ ಹಳದಿ ಆಗಿದ್ರೆ ಜಸ್ಟ್ ಈ ರೀತಿ ಮಾಡಿ ಸಾಕು

0 comments

Toilet cleaning tips: ಎಷ್ಟೇ ಸ್ವಚ್ಛಗೊಳಿಸಿದರೂ ಏನು ಪ್ರಯೋಜನ ಟಾಯ್ಲೆಟ್‌ ಕಮೋಡ್‌ನಲ್ಲಿ ಅಂಟಿರುವ ಹಳದಿ ಕಲೆಗಳು ಮಾತ್ರ ಹೋಗುತ್ತಿಲ್ಲ ಎಂಬ ನಿಮ್ಮ ಚಿಂತೆಗೆ ಇಲ್ಲಿದೆ ಪರಿಹಾರ. ಹೌದು, ನಿಮ್ಮ ಮನೆಯ ಟಾಯ್ಲೆಟ್‌ ಕಮೋಡ್‌ ಕೂಡ ಗಾಢ ಕಲೆಯನ್ನು ಹೊಂದಿವೆಯೇ, ಹಾಗಿದ್ರೆ ಇದನ್ನು ತೊಡೆದು ಹಾಕಲು ಯಾವುದೇ ದುಬಾರಿ ಉತ್ಪನ್ನಗಳ ಅವಶ್ಯಕತೆಯೇ ಇಲ್ಲ, ಬಾಳೆಹಣ್ಣಿನ ಸಿಪ್ಪೆಯೇ ಸಾಕು. ಈ ಸಿಪ್ಪೆಯನ್ನು ಟಾಯ್ಲೆಟ್‌ ಸ್ವಚ್ಛಗೊಳಿಸಲು ಹೇಗೆ ಬಳಸುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.ಬಾಳೆಹಣ್ಣಿನ ಸಿಪ್ಪೆಯಿಂದ ಟಾಯ್ಲೆಟ್‌ ಕಮೋಡ್‌ ಸ್ವಚ್ಛಗೊಳಿಸುವುದು ಹೇಗೆ?ಟಾಯ್ಲೆಟ್‌ ಕಮೋಡ್‌ನಲ್ಲಿ ಅಂಟಿರುವ ಕಲೆಗಳನ್ನು ಹೋಗಲಾಡಿಸಲು ಬಾಳೆಹಣ್ಣಿನ ಸಿಪ್ಪೆಯನ್ನು ಕಟ್‌ ಮಾಡಿ ಅದನ್ನು ಮಿಕ್ಸಿಜಾರ್‌ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಇದೀಗ ಈ ಪೇಸ್ಟನ್ನು ಒಂದು ಪಾತ್ರೆಗೆ ವರ್ಗಾಯಿಸಿ. ಅದಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ ದಪ್ಪ ಪೇಸ್ಟ್‌ ತಯಾರಿಸಿಕೊಳ್ಳಿ. ಕೊನೆಗೆ ಅದಕ್ಕೆ ಸ್ವಲ್ಪ ಶಾಂಪೂ ಸೇರಿಸಿ ಇನ್ನೊಮ್ಮೆ ಎಲ್ಲವನ್ನು ಮಿಕ್ಸ್‌ ಮಾಡಿದರೆ ನ್ಯಾಚುರಲ್‌ ಟಾಯ್ಲೆಟ್‌ ಕ್ಲೀನರ್‌ ಸಿದ್ಧ.ಇದೀಗ ಈ ಕ್ಲೀನರ್‌ ಮಿಶ್ರಣವನ್ನು ಟಾಯ್ಲೆಟ್‌ ಕಮೋಡ್‌ ಮೇಲೆ ಸುರಿದು, ಸ್ವಲ್ಪ ಹೊತ್ತಿನ ಬಳಿಕ ಚೆನ್ನಾಗಿ ಬ್ರಶ್‌ನಿಂದ ತಿಕ್ಕಿ. ಕೊನೆಗೆ ನೀರು ಹಾಕಿ ಸ್ವಚ್ಛಗೊಳಿಸಿದರೆ ನಿಮ್ಮ ಶೌಚಾಲಯ ಹೊಸದರಂತೆ ಕಾಣಿಸುತ್ತದೆ.

You may also like