ಇಸ್ಲಾಮಾಬಾದ್: ಭಯೋತ್ಪಾದನೆಗೆ ಪಾಕಿಸ್ತಾನ ನೆರವು ನೀಡುತ್ತಿದೆ ಎಂಬುದಕ್ಕೆ ಮತ್ತೊಂದು ದೊಡ್ಡ ಸಾಕ್ಷಿ ಸಿಕ್ಕಿದೆ. ನಮ್ಮ ಭಯೋತ್ಪಾದಕ ಗುಂಪುಗಳು ಕೆಂಪು ಕೋಟೆಯಿಂದ ಕಾಶ್ಮೀರದ ಅರಣ್ಯದವರೆಗೂ ನುಗ್ಗಿ ಭಾರತವನ್ನು ಹೊಡೆದಿವೆ ಎಂದು ಪಾಕಿಸ್ತಾನದ ರಾಜಕಾರಣಿ ಚೌಧರಿ ಅನ್ವರುಲ್ ಹಕ್ ಹೇಳಿದ್ದಾರೆ.
ನವೆಂಬರ್ 10 ರಂದು ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಸ್ಪೋಟದಲ್ಲಿ 14 ಜನರು ಮೃತಪಟ್ಟಿದ್ದರು. ಇದನ್ನು ಕೆಂಪುಕೋಟೆ ಎಂಬ ಹೇಳಿಕೆಯಲ್ಲಿ ಹಕ್ ಉಲ್ಲೇಖಿಸಿದ್ದಾರೆ. ಚಾಲಿತ ಮಾಸ್ಟರ್ ಮೈಂಡ್ ಡಾ. ಉಮರ್ ಉನ್ ನಬಿ ಜೈಶ್ ಇ ಮೊಹಮ್ಮದ್ (ಜೆಇಎಂ) ಸಂಘಟನೆಯ ಸದಸ್ಯನಾಗಿದ್ದ. ಆತ ಫರಿದಾಬಾದ್ ನಲ್ಲಿ ‘ವೈಟ್-ಕಾಲರ್’ ಭಯೋತ್ಪಾದಕ ಮಾಡ್ಯೂಲ್ ಹುಟ್ಟುಹಾಕಿದ್ದ.
ಹಕ್ ಅವರ ‘ಕಾಶ್ಮೀರದ ಅರಣ್ಯಗಳು ಎಂಬ ಹೇಳಿಕೆಯು ಏಪ್ರಿಲ್ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿ 26 ಜನರನ್ನು ಬಲಿಪಡೆದುಕೊಂಡದ್ದನ್ನು ಸೂಚಿಸುತ್ತದೆ. ಹಕ್ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, ಅಲ್ಲಾಹುನ ಆಶೀರ್ವಾದದಿಂದ ಅದನ್ನು ನಾವು ಮಾಡಿದ್ದೇವೆ. ಶವ ಎಣಿಸಲು ಭಾರತದವರಿಗೆ ಇನ್ನೂ ಆಗಿಲ್ಲ. ಕೆಲವು ದಿನಗಳ ನಂತರ, ಶಸ್ತ್ರಸಜ್ಜಿತ ವ್ಯಕ್ತಿಗಳು ದೆಹಲಿಗೆ ಪ್ರವೇಶಿಸಿದ್ದಾರೆ. ಅವರಿಗೆ ಬಹುಶ: ಇಲ್ಲಿಯವರೆಗೆ ಎಲ್ಲಾ ಮೃತದೇಹಗಳನ್ನು ಎಣಿಸಲು ಸಾಧ್ಯವಾಗಿಲ್ಲ ಎಂದು ಹಕ್ ಗೇಲಿ ಮಾಡಿ ಹೇಳಿರುವುದು ವಿಡಿಯೋದಲ್ಲಿದೆ. ಆದರೆ ಭಾರತ ಇಸ್ಲಾಮಾಬಾದ್ನ ಹೇಳಿಕೆಗಳನ್ನು ತಿರಸ್ಕರಿಸಿದೆ. ಭಾರತ ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಪ್ರತೀಕಾರದ ಹೆಜ್ಜೆ ಹಾಕಿದೆ.
