Banana: ಬಾಳೆಹಣ್ಣು ಹೆಚ್ಚಿನ ಪ್ರೋಟೀನ್ ಹೊಂದಿರುವ ಹಣ್ಣುಗಳಲ್ಲಿ ಒಂದು. ವರ್ಷವಿಡೀ ಲಭ್ಯವಾಗೋ ಈ ಹಣ್ಣನ್ನು ಡಯಟ್ ಫುಡ್ ಆಗಿಯೂ ಬಳಸುತ್ತಾರೆ. ಅಲ್ಲದೆ ಊಟವಾದ ಮೇಲೆ ಒಂದು ಬಾಳೆ ಹಣ್ಣು(protection of Banana) ತಿಂದರೇನೇ ಅದು ಪೂರ್ತಿ ಅನಿಸುತ್ತದೆ ಎಂಬ ಮಾತೂ ಇದೆ. ಆದರೆ ಸಮಸ್ಯೆ ಏನಪ್ಪಾ ಅಂದರೆ ಮನೆಗೆ ತಂದ ಬಾಳೆ ಹಣ್ಣು ಬೇಗ ಕೊಳೆತುಹೋಗುತ್ತೆ. ಎಷ್ಟು ಜೋಪಾನ ಮಾಡಿದರೂ ಹಾಳಾಗಿಬಿಡುತ್ತೆ ಅನ್ನೋದು. ಹಾಗಿದ್ರೆ ನೀವು ಬಾಳೆಹಣ್ಣನ್ನು ತಂದು ತಕ್ಷಣ ಈ ರೀತಿಯಾಗಿ ಜೋಪಾನ ಮಾಡಿ. ಹೀಗೆ ಮಾಡಿದರೆ 15 ದಿನವಾದರೂ ಬಾಳೆಹಣ್ಣು ತಾಜವಾಗಿರುತ್ತದೆ.
ಬಾಳೆಹಣ್ಣುಗಳು ಒಂದೇ ಗೊಂಚಲಿನಲ್ಲಿ ಇದ್ದರೆ ಒಂದು ಹಣ್ಣಾದರೆ ಉಳಿದವು ಬೇಗನೆ ಹಣ್ಣಾಗುತ್ತವೆ. ಆದ್ದರಿಂದ ಅವುಗಳನ್ನು ಗೊಂಚಲಿನಿಂದ ಬೇರ್ಪಡಿಸಿ ಪ್ರತ್ಯೇಕವಾಗಿ ಇಡಬೇಕು.
ಹಣ್ಣುಗಳನ್ನು ಕಂದು ಬಣ್ಣದ ಕಾಗದದ ಬ್ಯಾಗ್‌ನಲ್ಲಿ ಹಾಕಿ ಮುಚ್ಚಿ. ಚೀಲದಲ್ಲಿ ಎಥಿಲೀನ್ ಗ್ಯಾಸ್ ನಿಲ್ಲುತ್ತದೆ. ಬೇಗ ಹಣ್ಣಾಗಲು ಒಂದು ಸೇಬು ಅಥವಾ ಟೊಮೆಟೊ ಸೇರಿಸಿ. ಈಥಿಲೀನ್ ಅನಿಲ ಹೆಚ್ಚಾಗಿ ಬಾಳೆಹಣ್ಣಿನ ಕಾಂಡದ ಬದಿಯಿಂದ ಹೊರಬರುತ್ತದೆ. ಆ ಭಾಗವನ್ನು ಕ್ಲಿಂಗ್ ಫಿಲ್ಮ್ (Cling film) ನಿಂದ ಬಿಗಿಯಾಗಿ ಸುತ್ತಿ. ಹೀಗೆ ಮಾಡುವುದರಿಂದ ಅದು 4-6 ದಿನಗಳವರೆಗೆ ತಾಜಾವಾಗಿರುತ್ತದೆ.
ಬಾಳೆಹಣ್ಣುಗಳನ್ನು ಕತ್ತರಿಸಿದ ನಂತರ, ಅವು ಬೇಗನೆ ಕಂದು ಬಣ್ಣಕ್ಕೆ ತಿರುಗುವುದನ್ನು ತಡೆಯಲು ನಿಂಬೆ ಅಥವಾ ಕಿತ್ತಳೆ ರಸವನ್ನು ಸಿಂಪಡಿಸಿ. ಸಿಟ್ರಿಕ್ ಆಮ್ಲವು ಆಕ್ಸಿಡೀಕರಣವನ್ನು ನಿಲ್ಲಿಸುತ್ತದೆ.
ಬಾಳೆಹಣ್ಣಿನ ಕಾಂಡವನ್ನು ಕೆಳಗೆ ಇರುವಂತೆ ನೇತು ಹಾಕಬೇಕು. ಇದು ಕಾಂಡಕ್ಕೆ ತೇವಾಂಶ ತಲುಪುವುದನ್ನು ತಡೆಯುತ್ತದೆ.
ಬಾಳೆಹಣ್ಣಿನ ಕಾಂಡವನ್ನು ಕಾಗದ ಅಥವಾ ಪ್ಲಾಸ್ಟಿಕ್‌ನಲ್ಲಿ ಸುತ್ತಿ ಇಡುವುದರಿಂದ ಹಣ್ಣು ಬೇಗ ಕೆಡುವುದಿಲ್ಲ. ಯಾಕೆಂದರೆ ಬಾಳೆಹಣ್ಣುಗಳು ಹಣ್ಣಾದಾಗ, ಅವುಗಳ ಕಾಂಡಗಳು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತವೆ. ಅದು ಉಳಿದ ಹಣ್ಣುಗಳಿಗೆ ಹರಡಿ, ಬೇಗನೆ ಹಣ್ಣುಗಳನ್ನು ಕೊಳೆಯುವಂತೆ ಮಾಡುತ್ತದೆ. ಅದಕ್ಕಾಗಿಯೇ ಕಾಂಡದ ಸುತ್ತಲೂ ಪ್ಲಾಸ್ಟಿಕ್ ಹೊದಿಕೆಯನ್ನು ಸುತ್ತುವುದರಿಂದ ಎಥಿಲೀನ್ ಅನಿಲವು ಅಲ್ಲೇ ಇರುತ್ತದೆ. ಹೀಗಾಗಿ ಬಾಳೆಹಣ್ಣುಗಳು ಸುರಕ್ಷಿತವಾಗಿರುತ್ತವೆ.
