3
ಕೊಚ್ಚಿ: ಕೊಚ್ಚಿಯ ಕೇಂದ್ರೀಯ ಸಾಗರ ಮೀನುಗಾರಿಕೆ ಸಂಶೋಧನಾಸಂಸ್ಥೆ ವಿಜ್ಞಾನಿಗಳು ಬೊಂಡಾಸ್ (ಸ್ಕ್ವಿಡ್)ನ ಹೊಸ ಪ್ರಭೇದವೊಂದನ್ನು ಅರಬ್ಬಿ ಸಮುದ್ರದಲ್ಲಿ ಪತ್ತೆ ಮಾಡಿದ್ದಾರೆ. ಇವಕ್ಕೆ ‘ಟ್ಯಾನಿಂಗಿಯಾ ಸಿಲಾಸಿ’ ಎಂಬ ವೈಜ್ಞಾನಿಕ ಹೆಸರಿಡಲಾಗಿದೆ. ಈ ಅಪರೂಪದ ಜಾತಿಗೆ ಸೇರಿದ 2ನೇ ದೃಢೀಕೃತ ಪ್ರಬೇಧ ಇದಾಗಿದೆ.
ಅಟ್ಲಾಂಟಿಕ್ ಸಮುದ್ರ ಎಂದಲ್ಲಿನ ‘ಟ್ಯಾನಿಂಗಿಯಾ ಡಾನೇ’ ಈ ಜಾತಿಯ ಗುರುತಿಸಲಾದ ಏಕೈಕ ಪ್ರಭೇದ. ಕೊಲ್ಲಂ ಬಳಿ 390 ಮೀ. ಆಳದಲ್ಲಿ ಸಿಕ್ಕ ಇದಕ್ಕೆ ‘ಭಾರತೀಯ ಆಕೋಪಸ್ ಸ್ಕ್ವಿಡ್ ಎನ್ನಲಾಗುತ್ತದೆ.
ಬೊಂಡಾಸ್ ಅನ್ನು ಸಾಮಾನ್ಯವಾಗಿ ಮೀನೆಂದು ಜನ ಪರಿಗಣಿಸುತ್ತಾರೆ. ಆದರೆ ಅವು ಮೀನು ಜಾತಿಗೆ ಸೇರಿಲ್ಲ. ಆಕ್ಟೋಪಸ್ ಮತ್ತು ಕಟಲ್ ಮೀನಿನ ಪಂಗಡಕ್ಕೆ ಸೇರಿರುವ ಬೆನ್ನುಮೂಳೆಯಿಲ್ಲದ ಅಕಶೇರುಕ ಜೀವಿಗಳು.
