Home » BBK-12 : ಇಂದು ಬಿಗ್ ಬಾಸ್ ಮನೆಯಿಂದ ಹೊರ ಹೋಗೋದು ಇವರೇ ನೋಡಿ!!

BBK-12 : ಇಂದು ಬಿಗ್ ಬಾಸ್ ಮನೆಯಿಂದ ಹೊರ ಹೋಗೋದು ಇವರೇ ನೋಡಿ!!

0 comments

BBK-12 : ಬಿಗ್‌ಬಾಸ್‌ ಕನ್ನಡ ಸೀಸನ್‌ 12ರಲ್ಲಿ (Bigg Boss Kannada Season 11) ಈ ಬಾರಿ ಯಾರು ಮನೆಯಿಂದ ಹೊರಹೋಗ್ತಾರೆ ಎಂಬ ಕುತೂಹಲ ಜನರಲ್ಲಿ ಹೆಚ್ಚಾಗಿದೆ. ಕಳೆದ ಬಾರಿ ಅಚ್ಚರಿಯೆಂಬಂತೆ ಕಾಕ್ರೋಚ್‌ ಸುಧಿ ಅವರು ಮನೆಯಿಂದ ಎಲಿಮಿನೇಟ್‌ ಆಗಿದ್ದರು. ಈ ಬಾರಿ ರಿಷಾ ಎಲಿಮಿನೇಟ್‌ ಆಗಿದ್ದಾರೆ ಎನ್ನಲಾಗಿದೆ.

ಹೌದು, ರಿಷಾ ಅವರು ವೈಲ್ಡ್‌ ಕಾರ್ಡ್‌ ಎಂಟ್ರಿಯಲ್ಲಿ ಮನೆಯೊಳಗೆ ಬಂದರು. ಭಯಂಕರ ರೋಷಾವೇಶದಲ್ಲಿ ಬಂದ ಅವರು ತುಂಬ ದಿನಗಳವರೆಗೆ ಮನೆಯಲ್ಲಿ ತಮ್ಮ ಅಸ್ತಿತ್ವ ಕಂಡುಕೊಳ್ಳಲು ಪರದಾಡಿದರು. ಎಲ್ಲರ ಬಳಿಯೂ ಜಗಳ ಮಾಡಿಕೊಂಡರು. ಸುಮ್ಮನೆ ಕಿರಚಾಡಿದರು. ಇನ್ನು ಗಿಲ್ಲಿ ಮೇಲೆ ಕೈಮಾಡಿ ಪ್ರೇಕ್ಷಕರ ಸಿಟ್ಟಿಗೆ ಕಾರಣರಾದರು. ಗಿಲ್ಲಿಗೆ ಹೊಡೆದರೂ ಅವರನ್ನ ಮನೆಯಿಂದ ಕಳಿಸಿರಲಿಲ್ಲ. 

ಧ್ರುವಂತ್‌ ಬಗ್ಗೆ ರಿಷಾ ತೋರಿದ್ದ ವರ್ತನೆ ಸುದೀಪ್‌ ಕೆಂಗಣ್ಣಿಗೆ ಕಾರಣವಾಗಿತ್ತು. ಇಡೀ ವಾರ ರಿಷಾ ಸೈಲೆಂಟ್‌ ಆಗಿಯೇ ಉಳಿದರು. ಟಾಸ್ಕ್‌ ಬಗ್ಗೆ ಜಾಸ್ತಿ ಗಮನ ಕೊಟ್ಟರು. ಗಿಲ್ಲಿ ಬಳಿ ಮತ್ತೆ ಸ್ನೇಹ ತೋರಿಸಿದರು. ಆದರೆ ಕೊನೇ ದಿನ ಮಾಳು ಜೊತೆ ಗಲಾಟೆ ಆಯಿತು. ಮನೆಯಲ್ಲಿ ಯಾರಿಗೂ ರಿಷಾ ಅಷ್ಟೊಂದು ಆಗಿ ಬರ್ತಿಲ್ಲ. ರಾಶಿಕಾ ಜೊತೆಯೂ ಜಗಳ ಆಡಿಕೊಂಡಿದ್ದಾರೆ. ಟಾಸ್ಕ್‌ ಅಂತ ಬಂದಾಗಲೂ ಅವರು ಅಂಥ ಚೆನ್ನಾಗಿ ಆಡೋದಿಲ್ಲ. ಮನೆ ಕೆಲಸ ಮಾಡೋದಿಲ್ಲ ಎಂಬ ಕಂಪ್ಲೇಂಟ್‌ ಕೂಡ ಇದೆ. ಇದೆಲ್ಲದರ ಮಧ್ಯೆ ರಿಷಾ ಈಗ ಮನೆಯಿಂದ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ.

You may also like