Home » ನಿಮ್ಮಲ್ಲಿ ಮತಗಳಿವೆ, ನನ್ನಲ್ಲಿ ಹಣವಿದೆ, ಮತ ಕೊಟ್ರೆ ಮಾತ್ರ ಅಭಿವೃದ್ಧಿ- ಮಹಾ ಡಿಸಿಎಂ ಅಜಿತ್‌ ಪವಾರ್

ನಿಮ್ಮಲ್ಲಿ ಮತಗಳಿವೆ, ನನ್ನಲ್ಲಿ ಹಣವಿದೆ, ಮತ ಕೊಟ್ರೆ ಮಾತ್ರ ಅಭಿವೃದ್ಧಿ- ಮಹಾ ಡಿಸಿಎಂ ಅಜಿತ್‌ ಪವಾರ್

0 comments

ಪುಣೆ: ‘ನಿಮ್ಮಲ್ಲಿ ಮತಗಳಿದ್ರೆ, ನನ್ನಲ್ಲಿ ಹಣವಿದೆ. ನೀವು ತಿರಸ್ಕರಿಸಿದರೆ, ನಾನೂ ತಿರಸ್ಕರಿಸುತ್ತೇನೆ’ -ಇದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್ ಅವರ ವರ್ಷನ್. ಇದು ಅವರು ಮತದಾರರಿಗೆ ನೀಡಿದ ಎಚ್ಚರಿಕೆ ಸಂದೇಶ. ಅವರು ಬಾರಾಮತಿ ತಾಲ್ಲೂಕಿನ ಮಾಲೇಗಾಂವ್ ನಗರ ಪಂಚಾಯಿತಿಯಲ್ಲಿ ಎನ್‌ಸಿಪಿ ಅಭ್ಯರ್ಥಿಗಳ ಪರ ಪ್ರಚಾರದ ವೇಳೆ ಈ ರೀತಿ ಹೇಳಿಕೆ ನೀಡಿದ್ದಾರೆ.

ಮಹಾರಾಷ್ಟ್ರದ ಬಿಜೆಪಿ-ಎನ್‌ಸಿಪಿ, ಶಿವಸೇನಾ ಸರ್ಕಾರದಲ್ಲಿ ಅಜಿತ್ ಪವಾರ್‌ ಹಣಕಾಸು ಸಚಿವರಾಗಿದ್ದಾರೆ. ಅಭಿವೃದ್ಧಿಗೆ ಅನುದಾನ ಒದಗಿಸಲು ಹಣದ ಕೊರತೆಯಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸದಿದ್ದರೆ, ಅವರು ಕೂಡ ನಿಮ್ಮನ್ನು ತಿರಸ್ಕರಿಸಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದ್ದು ಪರೋಕ್ಷವಾಗಿ ಮತ ಕೊಟ್ರೆ ಅಭಿವೃದ್ದಿ, ಇಲ್ಲದಿದ್ದರೆ ಇಲ್ಲ ಎಂದಿದ್ದಾರೆ.

You may also like