Home » Smriti mandhana: ಕ್ರಿಕೆಟ್ ತಾರೆ ಸ್ಮೃತಿ ಮಂಧಾನ ತಂದೆಗೆ ಹೃದಯಾಘಾತ, ವಿವಾಹ ಮುಂದೂಡಿಕೆ

Smriti mandhana: ಕ್ರಿಕೆಟ್ ತಾರೆ ಸ್ಮೃತಿ ಮಂಧಾನ ತಂದೆಗೆ ಹೃದಯಾಘಾತ, ವಿವಾಹ ಮುಂದೂಡಿಕೆ

0 comments

Smriti mandhana: ಮದುವೆಯ (Marriage) ಸಂಭ್ರಮದಲ್ಲಿದ್ದ ಟೀಮ್ ಇಂಡಿಯಾ (Team india) ಮಹಿಳಾ ತಂಡದ ಕ್ರಿಕೆಟ್ ಸ್ಮೃತಿ ಮಂಧಾನ (Smriti mandhana) ಅವರಿಗೆ ಆತಂಕ ಎದುರಾಗಿದೆ. ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದ ವೇಳೆ ಅವರ ತಂದೆಗೆ ಹೃದಯಾಘಾತ ಸಂಭವಿಸಿದೆ.

ಹೀಗಾಗಿ ವಿವಾಹ ಮುಂದೂಡಿಕೆಯಾಗಿದೆ. ಇಂದು (ನ.23) ಸ್ಮೃತಿ ಮಂಧಾನ ಅವರ ವಿವಾಹ ನೆರವೇರಬೇಕಿತ್ತು.ಆದ್ರೆ ಇಂದು ಬೆಳಿಗ್ಗೆಯಿಂದ ಅವರ ತಂದೆಯ ಆರೋಗ್ಯ ಸರಿಯಿರಲಿಲ್ಲ.ಹೀಗಾಗಿ ಅವರನ್ನು ಸಾಂಗ್ಲಿಯ ಆಸ್ಪತ್ರೆಗೆ ಕರೆದೊಯ್ದು ತ್ವರಿತ ಚಿಕಿತ್ಸೆಗೆ ಒಳಪಡಿಸಲಾಗಿದೆ. ಹೀಗಾಗಿ ಈ ಕಾರಣದಿಂದ ಸ್ಮೃತಿ ಇಂತಹ ಸಂದರ್ಭದಲ್ಲಿ ಮದುವೆಯಾಗಲು ಇಷ್ಟಪಡದ ಕಾರಣ ಮದುವೆ ಮುಂದೂಡಲಾಗಿದೆ.ಕಳೆದ ಎರಡು ದಿನಗಳಿಂದ ಈ ಜೋಡಿಯ ವಿವಾಹದ ಆಚರಣೆಗಳು ಅದ್ದೂರಿಯಾಗಿ ನೆರವೇರಿದ್ದವು. ಮೆಹೆಂದಿ, ಹಲ್ಲಿ ಮತ್ತು ಸಂಗೀತ್ ಕಾರ್ಯಕ್ರಮಗಳು ಕೂಡ ನೆರವೇರಿತ್ತು.ಆದ್ರೆ ಈ ಎಲ್ಲಾ ಸಂಭ್ರಮದ ಮಧ್ಯೆ ಅನಿರೀಕ್ಷಿತವಾಗಿ ಸ್ಮೃತಿ ಅವರ ತಂದೆಗೆ ಹೃದಯಾಘಾತ ಸಂಭವಿಸಿದ್ದು ಕುಟುಂಬವನ್ನು ಆತಂಕಕ್ಕೆ ದೂಡಿದೆ.

You may also like