11
ಮಂಗಳೂರು: ಕುಖ್ಯಾತ ಭೂಗತ ಪಾತಕಿಗಳಾದ ರವಿಪೂಜಾರಿ ಮತ್ತು ಕಲಿ ಯೋಗೀಶ್ ಗ್ಯಾಂಗ್ ಜೊತೆ ನಂಟು ಹೊಂದಿದ್ದ, ವಕೀಲ ನೌಶಾದ್ ಕಾಶಿಂ ಕೊಲೆ ಪ್ರಕರಣದ ಹಂತಕ ಹಾಗೂ 11 ವರ್ಷ ಜೈಲುವಾಸ ಅನುಭವಿಸಿ ಹೊರಬಂದಿದ್ದ ಟಿ. ದಿನೇಶ್ ಶೆಟ್ಟಿ ಅಲಿಯಾಸ್ ದಿನ್ನು (ದಿಲೇಶ್) ನನ್ನು ಮಂಗಳೂರು ಉತ್ತರ ವಿಭಾಗದ ಪೊಲೀಸರು ಬಂಧನ ಮಾಡಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನನ್ನು ಎಸಿಪಿ ಉತ್ತರ ಉಪವಿಭಾಗ ಹಾಗೂ ಅವರ ತಂಡ ನ.25 ರಂದು ದಸ್ತಗಿರಿ ಮಾಡಿದ್ದಾರೆ.
