Home » Mamata Banerjee: ‘ನನ್ನನ್ನು ಮುಟ್ಟಿದ್ರೆ ಇಡೀ ದೇಶವನ್ನೇ ಅಲುಗಾಡಿಸುತ್ತೇನೆ’ – ಬಿಜೆಪಿಗೆ ಗುಟುರು ಹಾಕಿದ ಮಮತಾ ಬ್ಯಾನರ್ಜಿ

Mamata Banerjee: ‘ನನ್ನನ್ನು ಮುಟ್ಟಿದ್ರೆ ಇಡೀ ದೇಶವನ್ನೇ ಅಲುಗಾಡಿಸುತ್ತೇನೆ’ – ಬಿಜೆಪಿಗೆ ಗುಟುರು ಹಾಕಿದ ಮಮತಾ ಬ್ಯಾನರ್ಜಿ

0 comments

Mamata Banerjee: ‘ಪಶ್ಚಿಮ ಬಂಗಾಳದಲ್ಲಿ ನನ್ನನ್ನು ಟಚ್ ಮಾಡಿದ್ರೆ ಇಡೀ ದೇಶವನ್ನೇ ಅಲುಗಾಡಿಸಿ ಬಿಡುತ್ತೇನೆ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ಸಿಡಿದೆದ್ದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ವಿಚಾರವಾಗಿ ಮಾತನಾಡಿದ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಬಂಗಾಳದಲ್ಲಿ ನನ್ನನ್ನಾಗಲಿ ಅಥವಾ ನನ್ನ ಜನರನ್ನಾಗಲಿ ಗುರಿಯಾಗಿಸಿದರೆ, ನಾನು ಸುಮ್ಮನಿರುವುದಿಲ್ಲ. ಇಡೀ ದೇಶವನ್ನೇ ಅಲ್ಲಾಡಿಸುತ್ತೇನೆ (Shake the nation),” ಎಂದು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ ‘ಚುನಾವಣಾ ಆಯೋಗದ ಕೆಲಸ ನಿಷ್ಪಕ್ಷಪಾತವಾಗಿರಬೇಕು, ಅದು ‘ಬಿಜೆಪಿ ಆಯೋಗ’ದಂತೆ ವರ್ತಿಸಬಾರದು. ಮತದಾರರ ಪಟ್ಟಿಯಿಂದ ಒಬ್ಬನೇ ಒಬ್ಬ ಅರ್ಹ ಮತದಾರನ ಹೆಸರನ್ನು ತೆಗೆದುಹಾಕಲು ಆಯೋಗಕ್ಕೆ ಅಧಿಕಾರವಿಲ್ಲ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಬಿಹಾರದಲ್ಲಿ ಬಿಜೆಪಿ ಆಡಿದ ಆಟ ಬಂಗಾಳದಲ್ಲಿ ನಡೆಯುವುದಿಲ್ಲ. ಚುನಾವಣೆ ಮುಗಿದ ನಂತರ ನಾನು ದೇಶಾದ್ಯಂತ ಸಂಚರಿಸಿ ಹೋರಾಟ ನಡೆಸುತ್ತೇನೆ ಎಂದು ದೀದಿ ಸವಾಲು ಹಾಕಿದ್ದಾರೆ.

You may also like