Home » Mantesh Beelagi : ಮಾಂತೇಶ್ ಬೀಳಗಿ ಹಾಗೂ ಸಹೋದರರ ಸಾವು – ಒಟ್ಟಿಗೆ ಉರಿದ 4 ಚಿತೆಗಳು!!

Mantesh Beelagi : ಮಾಂತೇಶ್ ಬೀಳಗಿ ಹಾಗೂ ಸಹೋದರರ ಸಾವು – ಒಟ್ಟಿಗೆ ಉರಿದ 4 ಚಿತೆಗಳು!!

0 comments

Mantesh Beelagi : ನಾಡು ಕಂಡ ದಕ್ಷ ಐಎಎಸ್ ಆಫೀಸರ್, ಬೆಸ್ಕಾಂ ಎಮ್‌ಡಿ ಮಹಾಂತೇಶ್ ಬೀಳಗಿ ಅವರು ಭೀಕರ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದಾಗ ಜೇವರ್ಗಿ ತಾಲೂಕಿನ ಗೌನಹಳ್ಳಿ ಬಳಿ ಅವರ ಇನ್ನೋವಾ ಕಾರು ಅಪಘಾತಕ್ಕೀಡಾಗಿದ್ದು, ದುರ್ಘಟನೆಯಲ್ಲಿ ಸ್ಥಳದಲ್ಲೇ ಸಹೋದರರಿಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬ ಸಹೋದರ ಚಿಕಿತ್ಸೆ ಫಲಕಾರಿಯಾಗಿದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ನಿನ್ನೆ ಸಂಜೆ (26, ನ ) ಮಹಾಂತೇಶ್​ ಬೀಳಗಿ ಅವರ ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ ನೆರವೇರಿದ್ದು, ನಾಲ್ಕು ಜನ ಸಹೋದರರ ಶವಗಳನ್ನು ಒಂದೇ ಕಡೆ ಅಂತ್ಯಸಂಸ್ಕಾರ ಮಾಡಲಾಗಿದೆ. ನಾಲ್ಕು ಚಿತೆಗಳು ಒಟ್ಟಿಗೆ ಉರಿಯುವುದನ್ನು ಕಂಡರೆ ಎಂತವರ ಕರುಳು ಕೂಡ ಕಿತ್ತು ಬರುವಂತಿತ್ತು ಆ ದೃಶ್ಯ.

ಇನ್ನು ಮಾಂತೇಶ್ ಬೀಳಗಿ ಅವರ ಸಾವಿಗೆ ನಾಡಿನ ಗಣ್ಯಾತಿ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಹಲವು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.

You may also like