Jigg Boss : ಕನ್ನಡ ಕಿರುತೆರೆಯಲ್ಲಿ ಕಮಾಲ್ ಮಾಡಿರುವ ಬಿಗ್ ಬಾಸ್ ರಿಯಾಲಿಟಿ ಶೋ ಇಡೀ ಕನ್ನಡಿಗರ ಮನಸ್ಸನ್ನು ಗೆದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಶೋ ಬಗ್ಗೆ ಅನೇಕರು ನಾನ ರೀತಿಯ ವಿಶ್ಲೇಷಣೆ ಮಾಡಿದರು ಕೂಡ, ಅದೆಲ್ಲದಕ್ಕೂ ಮಿಗಿಲಾಗಿ ಜನರು ಬಿಗ್ ಬಾಸ್ ಅನ್ನು ಇಷ್ಟ ಪಡುತ್ತಾರೆ. ತಪ್ಪದೇ ವೀಕ್ಷಿಸುತ್ತಾರೆ. ಇದೀಗ ಈ ಬಿಗ್ ಬಾಸ್ ಶೋನಂತೆ ಕರಾವಳಿಯಲ್ಲಿ ‘ಜಿಗ್ ಬಾಸ್’ ಎಂಬ ಶೋ ಶುರುವಾಗಿದೆ.
ಹೌದು, ಬಿಗ್ ಬಾಸ್ ಮಾಜಿ ಸ್ಪರ್ಧಿಯಾಗಿರುವ ಧನರಾಜ್ ಆಚಾರ್ ಅವರು ತಮ್ಮ ಕುಟುಂಬದೊಂದಿಗೆ ಜಿಗ್ ಬಾಸ್ ಶೋ ಆರಂಭಿಸಿದ್ದಾರೆ. ಹಾಗಂತ ಇದು ಯಾವುದೇ ರಿಯಾಲಿಟಿ ಶೋಗಳಿಗೆ ಟಕ್ಕರ್ ಕೊಡುವುದಾಗಲಿ, ಕಾಂಪಿಟೇಶನ್ ನೀಡುವುದಾಗಲಿ ಮಾಡುತ್ತಿರುವ ಶೋ ಅಲ್ಲ. ಬದಲಿಗೆ ಬಿಗ್ ಬಾಸ್ ಶೋ ಅನ್ನು ಅನುಕರಿಸಿ ಜನರನ್ನು ರಂಜಿಸುತ್ತಿರುವ, ನಕ್ಕು ನಗಿಸುತ್ತಿರುವ ವಿನೂತನ ಪ್ರಯತ್ನ.
ಯಸ್, ಧನರಾಜ ಆಚಾರ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 11 ಸ್ಪರ್ಧಿಯಾಗಿದ್ದರು. ಫೈನಲ್ ಗೆ ಹತ್ತಿರ ಹತ್ತಿರ ಇರುವಂತೆ ಅವರು ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದಿದ್ದರು. ಆದರೆ ಈ ವೇಳೆಗೆ ಅವರು ಇಡೀ ಕನ್ನಡಿಗರ ಮನ ಗೆದ್ದು, ಎಲ್ಲರ ಮನದಲ್ಲಿ ಮುಗ್ಧ ಮನಸ್ಸಿನ ವ್ಯಕ್ತಿಯಾಗಿ ಮನೆ ಮಾತಾಗಿದ್ದರು. ಇದೀಗ ಈ ಧನರಾಜ ಆಚಾರ್ ರವರು ಬಿಗ್ ಬಾಸ್ ಸೀಸನ್ ಕನ್ನಡ-12ರ ಸ್ಪರ್ಧಿಗಳನ್ನು ಇಟ್ಟುಕೊಂಡು, ಅವರಂತೆ ಅನುಕರಣೆ ಮಾಡುತ್ತಾ, ತಮ್ಮ ಕುಟುಂಬದ ಸದಸ್ಯರನ್ನು ಬಳಸಿಕೊಂಡು, ಜಿಗ್ ಬಾಸ್ ಎಂಬ ಶೋ ಅನ್ನು ನಡೆಸುತ್ತಾ ನಡೆಸುತ್ತಿದ್ದಾರೆ.
ಇದರಲ್ಲಿ ಬಿಗ್ ಬಾಸ್ ರೀತಿಯಲ್ಲಿಯೇ ಎಲ್ಲಾ ತರಹದ ಅನೌನ್ಸ್ಮೆಂಟ್, ಚಟುವಟಿಕೆಗಳು ನಡೆಯುತ್ತವೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಕೆಲವೊಂದು ಮಾತುಗಳು ಟ್ರೋಲ್ ಆಗುವುದನ್ನು ಪ್ರಮುಖ ಕಂಟೆಂಟ್ ಆಗಿ ಇಟ್ಟುಕೊಂಡು ಅವರು ಜಿಗ್ ಬಾಸ್ ಅನ್ನು ನಡೆಸುತ್ತಿದ್ದಾರೆ. ಪ್ರಮುಖವಾಗಿ ಗಿಲ್ಲಿ ನಟ, ರಕ್ಷಿತಾ, ಅಶ್ವಿನಿ ಗೌಡ, ಚಂದ್ರಪ್ರಭ, ಸೇರಿದಂತೆ ಪ್ರಮುಖ ಸ್ಪರ್ಧಿಗಳನ್ನು ಸಿಕ್ಕಾಪಟ್ಟೆ ಅನುಕರಣೆ ಮಾಡುತ್ತ ಜನರನ್ನು ರಂಗಿಸುತ್ತಿದ್ದಾರೆ. ಈಗಾಗಲೇ ಯೂಟ್ಯೂಬ್ ನಲ್ಲಿ ವಿಡಿಯೋಗಳು ಅಪ್ಲೋಡ್ ಆಗಿದ್ದು ಲಕ್ಷಾನುಗಟ್ಟಲೆ ವ್ಯೂವ್ಸ್ ಕೂಡ ಪಡೆದು ಜನರ ಮೆಚ್ಚುಗೆ ಪಡೆದಿದೆ.
