Home » Madhu Bangarappa: ರಾಜ್ಯದ ಅನುದಾನಿತ ಶಾಲೆಗಳಿಗೆ 5,600 ಶಿಕ್ಷಕರ ನೇಮಕಾತಿ !! ಮಧು ಬಂಗಾರಪ್ಪ ಘೋಷಣೆ

Madhu Bangarappa: ರಾಜ್ಯದ ಅನುದಾನಿತ ಶಾಲೆಗಳಿಗೆ 5,600 ಶಿಕ್ಷಕರ ನೇಮಕಾತಿ !! ಮಧು ಬಂಗಾರಪ್ಪ ಘೋಷಣೆ

0 comments

Madhu Bangarappa : ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಸಚಿವ ಮಧು ಬಂಗಾರಪ್ಪ ಸಿಹಿಸುದ್ದಿ ನೀಡಿದ್ದು, ರಾಜ್ಯದ ಅನುದಾನಿತ ಶಾಲೆಗಳಲ್ಲಿ 5,600 ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಶಿಕ್ಷಕರ ಬಡ್ತಿ ಪ್ರಕ್ರಿಯೆ ಬಹಳ ವರ್ಷಗಳಿಂದ ಬಾಕಿ ಉಳಿದಿತ್ತು. ಅದಕ್ಕಾಗಿ ವಿಶೇಷ ಸಮಿತಿ ರಚನೆ ಮಾಡಿ ಸೇವಾ ನಿಯಮಗಳಿಗೆ (ಸಿ ಆಯಂಡ್ ಆರ್) ತಿದ್ದುಪಡಿ ತರಲಾಗಿದ್ದು, ಬಡ್ತಿ ಪ್ರಕ್ರಿಯೆಗೆ ಇದ್ದ ತೊಡಕುಗಳು ನಿವಾರಣೆಯಾಗಿವೆ. 

ಈ ಬೆನ್ನಲ್ಲೇ ರಾಜ್ಯದ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ 5,600 ಶಿಕ್ಷಕರನ್ನು ನೇಮಕ ಮಾಡಲಾಗುತ್ತಿದೆ ಇನ್ನು ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ಪ್ರಕ್ರಿಯೆ ಆರಂಭಿಸಲು ಇಲಾಖೆ ನಿರ್ಧರಿಸಿದೆ ಎಂದು ಅವರು ಹೇಳಿದ್ರು.

You may also like