Cyclone Ditwah: ದ್ವಿತ್ವಾ ಚಂಡಮಾರುತವು (Cyclone Ditwah) ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ವೇದಾರಣ್ಯಂ ಕರಾವಳಿ (Karavali) ಸಮೀಪಿಸಿದ್ದು, ಇಂದು ಅತಿಯಾದ ಮಳೆಯಿಂದ ಅಲ್ಲಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.
ಅದಕ್ಕಾಗಿ ಎಸ್ಡಿಆರ್ಎಫ್, ಎನ್ಡಿಆರ್ಎಫ್ ಸೇರಿದಂತೆ 28 ವಿಪತ್ತು ನಿರ್ವಹಣಾ ತಂಡಗಳನ್ನ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ.‘ದಿತ್ವಾ’ ಚಂಡಮಾರುತವು ಶ್ರೀಲಂಕಾ ಸಮೀಪದ ಬಂಗಾಳಕೊಲ್ಲಿಯಲ್ಲಿ ಕೇಂದ್ರೀಕೃತವಾಗಿದ್ದು, ಉತ್ತರ-ಈಶಾನ್ಯ ದಿಕ್ಕಿನತ್ತ 5 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ. ಭೂಭಾಗಕ್ಕೆ ಹತ್ತಿರವಾಗುತ್ತಿದ್ದಂತೆ ತೀವ್ರತೆ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿ ರಾಜ್ಯಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಜನಜೀವನ ಅಸ್ತವ್ಯಸ್ತಗೊಳ್ಳುವ ಮುನ್ಸೂಚನೆ ನೀಡಲಾಗಿದೆ. ನ.29ರಂದು ರಾತ್ರಿ 11:30ರ ಹೊತ್ತಿಗೆ ಚಂಡಮಾರುತವು 10.7°N ಅಕ್ಷಾಂಶ ಮತ್ತು 80.6°E ರೇಖಾಂಶದ ಬಳಿ ಕೇಂದ್ರೀಕೃತವಾಗಿದೆ. ಮುಂದಿನ 24 ಗಂಟೆಗಳಲ್ಲಿ ಚಂಡ ಮಾರುತವು ಉತ್ತರ ತಮಿಳುನಾಡು, ಪುದುಚೆರಿ ಕರಾವಳಿಗೆ ಅಪ್ಪಳಿಸಲಿದ್ದು, ಭೂಕುಸಿತ ಉಂಟುಮಾಡುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
