Home » Bigg Boss: ಬಿಗ್‌ ಬಾಸ್‌ ಮನೆಯಿಂದ ಜಾನ್ವಿ ಔಟ್‌

Bigg Boss: ಬಿಗ್‌ ಬಾಸ್‌ ಮನೆಯಿಂದ ಜಾನ್ವಿ ಔಟ್‌

0 comments

Bigg Boss: ಬಿಗ್‌ ಬಾಸ್‌ (Bigg Boss) ಮನೆಯಿಂದ ಜಾನ್ವಿ (Jhanvi) ಎಲಿಮಿನೇಟ್‌ ಆಗಿದ್ದಾರೆ. ಅಶ್ವಿನಿ ಗೌಡ (Ashwini Gowda) ಜೊತೆ ಉತ್ತಮ ಸ್ನೇಹ ಹೊಂದಿದ್ದ ಜಾನ್ವಿ ಜಾನ್ವಿ ಎಲಿಮಿನೇಷನ್‌ ಲಿಸ್ಟ್‌ನಲ್ಲಿ ಇದ್ದರು.

ಆರಂಭದಲ್ಲಿ ಧ್ರುವಂತ್‌ ನಂತರ ಮಾಳು ಸೇವ್‌ ಆಗಿದ್ದರಿಂದ ಜಾನ್ವಿ ಮನೆಯಿಂದ ಔಟ್‌ ಆಗಿದ್ದಾರೆ.ಈ ಹಿಂದೆ ಹಲವು ಬಾರಿ ಈ ಬಾರಿ ಬಿಗ್‌ ಬಾಸ್‌ ಗೆಲ್ಲಬೇಕು ಎಂದು ಸ್ಪರ್ಧಿಗಳ ಜೊತೆ ಜಾನ್ವಿ ಹೇಳುತ್ತಿದ್ದರು. ಆರಂಭದಲ್ಲಿ ಅಶ್ವಿನಿ ಗೌಡ ಜೊತೆ ಸೇರಿ ಜಾನ್ವಿ ಗೆಜ್ಜೆ ಶಬ್ಧ ಮಾಡಿದ್ದರು. ನಂತರ ಗೆಜ್ಜೆ ಧ್ವನಿ ಮಾಡಿದ್ದು ರಕ್ಷಿತಾ ಎಂದು ಮನೆಯವರನ್ನು ನಂಬಿಸಲು ಮುಂದಾಗಿದ್ದರು. ಈ ವಿಚಾರ ದೊಡ್ಡ ಸದ್ದು ಮಾಡಿತ್ತು.ಈ ಹಿಂದೆ ನಾಮಿನೇಟ್‌ ಆಗಿದ್ದರೂ ವೀಕ್ಷಕರ ವೋಟ್‌ನಿಂದ ಜಾನ್ವಿ ಸೇವ್‌ ಆಗುತ್ತಿದ್ದರು. ಆದರೆ ಈ ಬಾರಿ ವೀಕ್ಷಕರಿಂದ ಹೆಚ್ಚಿನ ವೋಟ್‌ ಪಡೆಯದ ಕಾರಣ ಮನೆಯಿಂದ ಔಟ್‌ ಆಗಿದ್ದಾರೆ.

You may also like