Home » Modi: ‘ಈ ಚಳಿಗಾಲದಲ್ಲಿ ಭಾರತದಲ್ಲೇ ಮದುವೆ ಆಗಿ’: ವೆಡ್ ಇನ್ ಇಂಡಿಯಾ ಗೆ ಕರೆ ನೀಡಿದ ಪ್ರಧಾನಿ

Modi: ‘ಈ ಚಳಿಗಾಲದಲ್ಲಿ ಭಾರತದಲ್ಲೇ ಮದುವೆ ಆಗಿ’: ವೆಡ್ ಇನ್ ಇಂಡಿಯಾ ಗೆ ಕರೆ ನೀಡಿದ ಪ್ರಧಾನಿ

0 comments
Marriage

Modi: ಪ್ರಧಾನಿ ನರೇಂದ್ರ ಮೋದಿಯವರು ಈ ಹಿಂದೆ ಭಾರತದಲ್ಲೇ ಮದುವೆ ಪ್ರವಾಸೋದ್ಯಮ ಉತ್ತೇಜಿಸಿ ಎಂದು ಕರೆ ನೀಡಿದ್ದು ಇದೀಗ ‘ಈ ಚಳಿಗಾಲದಲ್ಲಿ ಭಾರತದಲ್ಲೇ ಮದುವೆ ಆಗಿ. ವೆಡ್ ಇನ್ ಇಂಡಿಯಾ’ ಎಂದು ಹೇಳಿದ್ದಾರೆ.

‘ಚಳಿಗಾಲದಲ್ಲಿ ‘ವೆಡ್ ಇನ್ ಇಂಡಿಯಾ’ ಅಭಿಯಾನವು ವಿಭಿನ್ನ ಆಕರ್ಷಣೆ ಹೊಂದಿದ್ದು ಚಳಿಗಾಲದ ಹೊಳೆಯುವ ಹೊಂಬಣ್ಣದ ಬಿಸಿಲೇ ಇರಲಿ, ಪರ್ವತಗಳ ಇಳಿಜಾರಿನ ಮೇಲಿನ ಮಂಜಿನ ಹೊದಿಕೆಯೇ ಇರಲಿ, ಡೆಸ್ಟಿನೇಷನ್ ವಿವಾಹಕ್ಕೆ ಪರ್ವತಗಳು ಕೂಡಾ ಬಹಳ ಜನಪ್ರಿಯವಾಗುತ್ತಿವೆ. ಅನೇಕ ವಿವಾಹಗಳಂತೂ ಈಗ ವಿಶೇಷವಾಗಿ ಗಂಗಾ ನದಿಯ ತೀರದಲ್ಲಿ ನಡೆಯುತ್ತಿವೆ. ಚಳಿಗಾಲದ ಈ ದಿನಗಳಲ್ಲಿ ಹಿಮಾಲಯದ ಕಣಿವೆಗಳು ಜೀವಮಾನವಿಡೀ ನೆನಪಿನಲ್ಲಿ ಉಳಿಯುವಂತಹ ಒಂದು ವಿಶೇಷ ಅನುಭವದ ಭಾಗವಾಗುತ್ತವೆ. ಈ ಚಳಿಗಾಲದಲ್ಲಿ ಎಲ್ಲಿಗಾದರೂ ಪ್ರವಾಸ ಹೋಗಬೇಕೆಂದು ನೀವು ಆಲೋಚಿಸುತ್ತಿದ್ದಲ್ಲಿ ಹಿಮಾಲಯದ ಕಣಿವೆಗಳ ಆಯ್ಕೆಯನ್ನು ಖಂಡಿತವಾಗಿಯೂ ಇರಿಸಿಕೊಳ್ಳಿ’ ಎಂದೂ ಮಾಸಿಕ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮೋದಿ ಕರೆ ನೀಡಿದರು.

You may also like