ಶಿವಮೊಗ್ಗ: ಹೊಳೆಹೊನ್ನೂರು ಸಮೀಪದ ಹನುಮಂತಾಪುರದಲ್ಲಿ ನವವಿವಾಹಿತ ರಮೇಶ್‌ (30) ಸೋಮವಾರ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

ಭಾನುವಾರ (ನ.30) ಹರಪ್ಪನಹಳ್ಳಿ ಸಮೀಪದ ಬಂಡ್ರಿಯ ಮಧುವನ್ನು ವರಿಸಿದ್ದ ರಮೇಶ್‌ ಅವರು ಸೋಮವಾರ (ಡಿ.1) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮದುವೆ ನಂತರ ರಮೇಶ್‌ ವಧುವಿನ ಮನೆಗೆ ತೆರಳಿದ್ದು, ದೇವಸ್ಥಾನದಿಂದ ಮೆರವಣಿಗೆ ಮೂಲಕ ವಧುವಿನ ಮನೆಗೆ ಕರೆದುಕೊಂಡು ಹೋಗಿದ್ದರು. ವಧು ಮನೆಗೆ ತಲುಪಿದ ರಮೇಶ್‌ ದಂಪತಿ ದೇವರಿಗೆ ಕೈ ಮುಗಿಯಲು ತೆರಳಿದ ವೇಳೆ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಸಮಯದಲ್ಲಿ ಮೃತಪಟ್ಟಿದ್ದರು.

ಮಂಗಳವಾರ ಹೊಸಕೊಪ್ಪದಲ್ಲಿ ರಮೇಶ್‌ ಅಂತ್ಯಕ್ರಿಯೆ ನಡೆದಿದೆ.

You may also like