Viral video: ಮೃಗಾಲಯದಲ್ಲಿ ಕಾಡು ಪ್ರಾಣಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿ ಜನರು ಪ್ರಾಣ ಕಳೆದುಕೊಂಡಿರುವ ಅನೇಕ ಘಟನೆಗಳಿವೆ.ಅಂತಹ ಒಂದು ವೀಡಿಯೊ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಹೌದು, ಬ್ರೆಜಿಲ್ನಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಸಿಂಹವನ್ನು ಹತ್ತಿರದಿಂದ ನೋಡುವ ಬಯಕೆ ಯುವಕನೊಬ್ಬನ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ. ವಿಡಿಯೋದಲ್ಲಿ, ಯುವಕನೊಬ್ಬ ಸಿಂಹವನ್ನು ಹತ್ತಿರದಿಂದ ನೋಡಲು ಪ್ರಯತ್ನಿಸಿದನು. ಹುಚ್ಚಾಟ ಮೆರೆದು ಯುವಕ ಮರ ಹತ್ತಿ ಸೀದಾ ಸಿಂಹ ಇರುವ ಬ್ಯಾರಕ್ ಗೆ ಇಳಿದನು. ಇದನ್ನು ನೋಡಿದ ಕೂಡಲೇ ಸಿಂಹ ಓಡಿ ಹೋಗಿ ಆತನನ್ನ ಎಳೆದುಕೊಂಡು ಪೊದೆಯ ಬಳಿ ಹೋಗಿ ಕೊಂದು ತಿಂದಿದೆ. ಪ್ರವಾಸಿಗರನ್ನು ತಮ್ಮ ಮೊಬೈಲ್ ನಲ್ಲಿ ಈ ದೃಶ್ಯ ಸೆರೆಹಿಡಿದಿದ್ದಾರೆ.
