Drinks: ‘ಕುಡುಕರೆ ಬೇರೆ,ಕುಡಿಯುವವರೆ ಬೇರೆ’ ಎಂದು ಎಣ್ಣೆ ಹೊಡೆಯುವವರಿಗೆ ಹೇಳುವ ಮಾತು ಒಂದಿದೆ. ಅಂದರೆ ಟೈಮ್ ಇಲ್ಲದೆ, ಪ್ರತಿದಿನವೂ ಕೂಡ ಕಂಠಪೂರ್ತಿ ಕುಡಿವವರನ್ನು ‘ಕುಡುಕರು ‘ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆಯೋ ಇಲ್ಲ ಅಪರೂಪಕ್ಕೆ ಎಣ್ಣೆ ಹೊಡೆಯುವವರು ‘ಕುಡಿಯುವರು’ ಎಂದರ್ಥವಂತೆ. ಈ ರೀತಿಯ ಅಭ್ಯಾಸವು ಅನೇಕರಿಗೆ ಇರುತ್ತದೆ. ಹಾಗಿದ್ದರೆ ಇವರಲ್ಲಿ ಯಾರಿಗೆ ‘ಎಣ್ಣೆ’ ಎಫೆಕ್ಟ್ ಜಾಸ್ತಿ ಗೊತ್ತಾ? ಈ ಕುರಿತಾಗಿ ತಜ್ಞರು ಏನು ಹೇಳುತ್ತಾರೆ ನೋಡೋಣ.
ವಾರಕ್ಕೊಮ್ಮೆ ಮದ್ಯಪಾನ ಮಾಡುವುದರ ಪರಿಣಾಮ: ವಾರಕ್ಕೊಮ್ಮೆ ಮದ್ಯಪಾನ ಮಾಡುವುದರಿಂದಲೂ ಫ್ಯಾಟಿ ಲಿವರ್ ಸಮಸ್ಯೆ ಬರುವ ಅಪಾಯ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದು ಲಿವರ್‌ಅನ್ನ ನಿರಂತರವಾಗಿ ಹೆಚ್ಚು ಕೆಲಸ ಮಾಡಲು ಕಾರಣವಾಗುತ್ತದೆ. ಬೆಳಗ್ಗೆ ನಿಮಗೆ ಹ್ಯಾಂಗೊವರ್ ಇರಬಹುದು ಮತ್ತು ಮರುದಿನ ಅದು ಇನ್ನೂ ಕೆಟ್ಟದಾಗಿರಬಹುದು. ಲಿವರ್ ನಿರಂತರವಾಗಿ ಒತ್ತಡದಲ್ಲಿರುತ್ತದೆ, ಕ್ರಮೇಣ ಫ್ಯಾಟಿ ಲಿವರ್‌ನ ಅಪಾಯವನ್ನ ಹೆಚ್ಚಿಸುತ್ತದೆ.
ಪ್ರತಿದಿನ ಮದ್ಯಪಾನ ಮಾಡುವುದರ ಪರಿಣಾಮ:
ಪ್ರತಿದಿನ ಮದ್ಯಪಾನ ಮಾಡುವವರಿಗೆ ಅನೇಕ ಅಪಾಯಗಳಿವೆ. ಅಂತಹ ಜನರ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಗಂಭೀರ ಸಂದರ್ಭಗಳಲ್ಲಿ ಕ್ಯಾನ್ಸರ್ ಅಪಾಯವೂ ಹೆಚ್ಚಾಗುತ್ತದೆ. ಪ್ರತಿದಿನ ಮದ್ಯಪಾನ ಮಾಡುವವರಿಗೆ ಅಪಾಯವು ತುಂಬಾ ಹೆಚ್ಚಾಗುತ್ತದೆ. ಅಂತಹ ಜನರು ಅಪಾಯಕಾರಿ ವರ್ಗಕ್ಕೆ ಸೇರುತ್ತಾರೆ. ಅಂತಹ ಜನರಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ, ಲಿವರ್ ಫೈಬ್ರೋಸಿಸ್ ಅಥವಾ ಸಿರೋಸಿಸ್ ಸಾಧ್ಯತೆಯೂ ಹೆಚ್ಚಾಗುತ್ತದೆ. ಹೆಚ್ಚು ಮದ್ಯಪಾನ ಮಾಡುವುದರಿಂದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಇದು ಹೃದಯ ಮತ್ತು ಮೇದೋಜ್ಜೀರಕ ಗ್ರಂಥಿಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
