Home » Ration Card: ರೇಷನ್ ಕಾರ್ಡ್ ಬೇಕಾದ್ರೆ ಮೊಬೈಲಲ್ಲೇ ಪಡೆಯಿರಿ- ಹೀಗೆ ಕುಳಿತಲ್ಲೇ ಡೌನ್ಲೋಡ್ ಮಾಡಿ

Ration Card: ರೇಷನ್ ಕಾರ್ಡ್ ಬೇಕಾದ್ರೆ ಮೊಬೈಲಲ್ಲೇ ಪಡೆಯಿರಿ- ಹೀಗೆ ಕುಳಿತಲ್ಲೇ ಡೌನ್ಲೋಡ್ ಮಾಡಿ

0 comments

Ration Card: ಸರ್ಕಾರಿ ಯೋಜನೆಗಳನ್ನು ಪಡೆಯುವಲ್ಲಿ ಅಥವಾ ಯಾವುದಾದರೂ ಕೆಲಸ ಕಾರ್ಯಗಳಿಗೆ ಮಹತ್ವದ ದಾಖಲೆಯಾಗುವ ನಿಟ್ಟಿನಲ್ಲಿ ಆಧಾರ್ ಕಾರ್ಡ್ ನಂತೆ ರೇಷನ್ ಕಾರ್ಡ್ ಕೂಡ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅದರ ಕೆಲವೊಮ್ಮೆ ನಾವು ತುರ್ತಾಗಿ ಹೋಗುವ ವೇಳೆ ರೇಷನ್ ಕಾರ್ಡ್ ಅನ್ನು ಮನೆಯಲ್ಲಿ ಮರೆತು ಬಿಡುತ್ತೇವೆ. ಆದರೆ ಇನ್ನು ಈ ಚಿಂತೆ ಬೇಡ. ಯಾಕೆಂದರೆ ಕುಳಿತಲ್ಲೇ ಕೆಲವು ನಿಮಿಷಗಳಲ್ಲಿ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ರೇಷನ್ ಕಾರ್ಡ್‌ನ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳುವ ಅವಕಾಶ ಲಭ್ಯವಾಗಿದೆ.

ಡೌನ್ಲೋಡ್ ಮಾಡಲು ಬೇಕಾಗುವ ದಾಖಲೆಗಳು

ರೇಷನ್ ಕಾರ್ಡ್ ಸಂಖ್ಯೆ

ಆಧಾರ್ ಅಥವಾ ರೇಷನ್ ಕಾರ್ಡ್‍ಗೆ ಲಿಂಕ್ ಆಗಿರುವ ಸಕ್ರಿಯ ಮೊಬೈಲ್ ಸಂಖ್ಯೆ (OTP ದೃಢೀಕರಣಕ್ಕಾಗಿ

ರೇಷನ್ ಕಾರ್ಡ್ ಡೌನ್ಲೋಡ್ ಮಾಡುವ ವಿಧಾನ

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್ಗೆ ಭೇಟಿ ನೀಡಿ:
https://ahara.karnataka.gov.in/fcs_verify_mser/

ಅಗತ್ಯ ಮಾಹಿತಿಯನ್ನು ನಮೂದಿಸಿ ‘Submit’ ಒತ್ತಿರಿ.

ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ಟೈಪ್ ಮಾಡಿ.

OTP ದೃಢೀಕರಣವಾದ ನಂತರ ರೇಷನ್ ಕಾರ್ಡ್ ಪರದೆಯ ಮೇಲೆ ಕಾಣಿಸುತ್ತದೆ. ಅದನ್ನು ಡೌನ್ಲೋಡ್ ಮಾಡಬಹುದು ಅಥವಾ ಪ್ರಿಂಟ್ ತೆಗೆದುಕೊಳ್ಳಬಹುದು.

You may also like