Home » KSCA election: ಕೆಎಸ್‌ಸಿಎ ಚುನಾವಣೆ ಫಲಿತಾಂಶ ಪ್ರಕಟ: ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆ

KSCA election: ಕೆಎಸ್‌ಸಿಎ ಚುನಾವಣೆ ಫಲಿತಾಂಶ ಪ್ರಕಟ: ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆ

0 comments

KSCA election: ಕಳೆದೆರೆಡು ತಿಂಗಳಿನಿಂದ ಚರ್ಚೆಯಲ್ಲಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ವೆಂಕಟೇಶ್ ಪ್ರಸಾದ್ ಬಣ ಭರ್ಜರಿ ಜಯ ಸಾಧಿಸಿದೆ.

ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ, ಕನ್ನಡಿಗ ವೆಂಕಟೇಶ್ ಪ್ರಸಾದ್‌ (Venkatesh Prasad) ಆಯ್ಕೆ ಆಗಿದ್ದಾರೆ.ಉಪಾಧ್ಯಕ್ಷರಾಗಿ ಸುಜಿತ್ ಸೋಮಸುಂದರ್, ಖಜಾಂಚಿ ಆಗಿ ಮಧುಕರ್, ಜನರಲ್ ಸೆಕ್ರೆಟರಿಯಾಗಿ ಸಂತೋಷ್ ಮೆನನ್ ಆಯ್ಕೆ ಆಗಿದ್ದಾರೆ. ಇನ್ನು ಬ್ರಿಜೇಶ್ ಪಟೇಲ್ ಬಣದ ಬಿ.ಕೆ ರವಿ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆ ಆಗಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಒಟ್ಟು 1,315 ಮತಗಳ ಚಲಾವಣೆ ಆಗಿದ್ದವು. ಒಟ್ಟು 16 ಸ್ಥಾನಗಳಲ್ಲಿ 11 ಸ್ಥಾನಗಳಲ್ಲಿ ವೆಂಕಟೇಶ್ ಪ್ರಸಾದ್ ಬಣ ಗೆದ್ದರು. ವೆಂಕಟೇಶ್ ಪ್ರಸಾದ್ 749 ಮತ ಹಾಗೂ ಶಾಂತಕುಮಾರ್ 558 ಮತಗಳನ್ನು ಪಡೆದಿದ್ದಾರೆ.

You may also like